ಕರಾಮು: ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅವಕಾಶ

Update: 2020-05-22 16:22 GMT

ಉಡುಪಿ, ಮೇ 22: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02 ರಿಂದ 2010-11ನೇ ಶ್ಯೆಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಸ್ನಾತಕ ಪದವಿಗಳಾದ ಬಿ.ಎ/ಬಿ.ಕಾಂ ಪದವಿ, 2001-02ರಿಂದ 2012-13ನೇ ಸಾಲಿನಲ್ಲಿ ಪ್ರವೇಶ ಪಡೆದ ಸ್ನಾತಕೋತ್ತರ ಪದವಿಗಳಾದ ಎಂ.ಎ/ಎಂಕಾಂ, ಎಂಬಿಎ, ಎಂಎಡ್, ಬಿಎಡ್, ಎಲ್ಲಾ ಎಂಎಸ್ಸಿಗಳು, ಸ್ನಾತಕೋತ್ತರ ಮತ್ತು ಡಿಪ್ಲೋಮಾ ವಿಷಯಗಳು ಹಾಗು ಸರ್ಟಿಫೀಕೆಟ್ ಕೋರ್ಸ್‌ಗಳಲ್ಲಿ ಅನುತ್ತೀರ್ಣ ಗೊಂಡಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಮನವಿ ಮೇರೆಗೆ ವಿಶ್ವದ್ಯಾನಿಲಯದ ಚಾಲ್ತಿಯಲ್ಲಿರುವ ಪಠ್ಯಕ್ರಮಗಳ ಅನುಗುಣವಾಗಿ ಒಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಇದಕ್ಕಾಗಿ ದಂಡಶುಲ್ಕವಿಲ್ಲದೇ ಜೂನ್ 30ರವರೆಗೆ ಪರೀಕ್ಷೆ ಕಟ್ಟುವುದಕ್ಕೆ ಅವಕಾಶ ನೀಡಲಾಗಿದೆ. ಈ ಸಾಲಿನ ಪರೀಕ್ಷಾ ವೇಳಾಪಟ್ಟಿಯನ್ನು ವಿವಿಯ ವೆಬ್‌ಸೈಟ್-www.ksoumysuru.ac.in -ನಲ್ಲಿ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ದೂರಾವಾಣಿ ಸಂಖ್ಯೆ: 0821-2519942, 2515405 ಮತ್ತು ಪ್ರಾದೇಶಿಕ ಕೇಂದ್ರ ಉಡುಪಿ ಕಛೇರಿ ಹಾಗೂ ಮೇಲಿನ ವೆಬ್‌ಸ್ಯೆಟ್‌ನ್ನು ಸಂಪರ್ಕಿಸಬಹುದು ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಡಾ.ಕೆ.ಪಿ.ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News