ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯ ಕಾರ್ಯಾಚರಣೆ ರಾಜ್ಯಕ್ಕೆ ಮಾದರಿ: ಹಾಫಿಳ್ ಯಾಕೂಬ್ ಸ‌ಅದಿ

Update: 2020-05-22 18:24 GMT

ಮಂಗಳೂರು: ಎಸ್ಸೆಸ್ಸೆಪ್ ನ ವಿವಿಧ ಘಟಕಗಳಿಂದ ಲಕ್ಷಾಂತರ ರೂಪಾಯಿಗಳ ಕಿಟ್ ವಿತರಿಸಲಾಗಿದೆ. ವಿಶೇಷವಾಗಿ ಅರ್ಹ ಕಾರ್ಯಕರ್ತರನ್ನು ಹುಡುಕಿ ಕೊಡುವ ಎಸ್ಸೆಸ್ಸೆಫ್ ದ.ಕ.ಜಿಲ್ಲೆಯ ಈ ಕಾರ್ಯಾಚರಣೆಯು ಶ್ಲಾಘನೀಯವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸ‌ಅದಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಫ್ ದ‌.ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿ, ಲಾಕ್‌ಡೌನ್ ಬಳಿಕ ಬಿಡುವಿಲ್ಲದೆ ಸಂಕಷ್ಟದಲ್ಲಿರುವವರಿಗೆ ಅರ್ಹ ರೀತಿಯಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿರುವ ಬ್ಲಡ್ ಸೈಬೋದ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು.

ಮುನ್ನುಡಿ ಮಾತುಗಳನ್ನಾಡಿ, ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲಾ ವ್ಯಾಪ್ತಿಯ ಸಾಂಘಿಕ ಕಾರ್ಯಾಚರಣೆಗೆ ಮತ್ತಷ್ಟು ಶಕ್ತಿ ನೀಡಲು ಉದ್ದೇಶಿಸಿದ್ದು, ಇದಕ್ಕೆ ಎಲ್ಲಾ ಕೆಳ ಘಟಕಗಳು ನಮ್ಮೊಂದಿಗೆ ಸಹಕರಿಸುವಂತೆ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಉಪಾಧ್ಯಕ್ಷರಾದ ಕೊಂಬಾಳಿ ಝುಹ್ರಿ, ಸಲೀಂ ಹಾಜಿ ಬೈರಿಕಟ್ಟೆ, ತೌಸೀಫ್ ಸ‌ಅದಿ ಹರೇಕಳ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಬ್ಲಡ್ ಸೈಬೋ ಹಾಗೂ ಮೀಡಿಯಾ ವಿಭಾಗಕ್ಕೆ ಪ್ರೋತ್ಸಾಹ ಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಜಮಾಲ್ ಸಖಾಫಿ ಸ್ವಾಗತಿಸಿ, ಕಾರ್ಯದರ್ಶಿ ರಶೀದ್ ಹಾಜಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News