ಲಾಕ್‌ಡೌನ್: ಕೊಲ್ಲೂರು ದೇವಳಕ್ಕೆ 14ಕೋಟಿ ರೂ. ನಷ್ಟ

Update: 2020-05-23 14:51 GMT

ಕೊಲ್ಲೂರು, ಮೇ 24: ಲಾಕ್‌ಡೌನ್‌ನಿಂದಾಗಿ ಸರಕಾರದ ಆದೇಶದಂತೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿರ್ಭಂಧಿಸಿ ರುವುದರಿಂದ ಕಳೆದ ಮೂರು ತಿಂಗಳಲ್ಲಿ ದೇವಸ್ಥಾನಕ್ಕೆ ಸುಮಾರು 14ಕೋಟಿ ರೂ. ನಷ್ಟ ಆಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಭಕ್ತರ ಪ್ರವೇಶ ಇಲ್ಲದ ಕಾರಣ ದೇವಳಕ್ಕೆ ಯಾವುದೇ ಆದಾಯ ಇಲ್ಲವಾಗಿದೆ. 2019ರ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ದೇವಸ್ಥಾನಕ್ಕೆ 13ಕೋಟಿ ಆದಾಯ ಬಂದಿದ್ದು, ಈ ವರ್ಷ 14ಕೋಟಿ ಆದಾಯ ಕಡಿಮೆ ಆಗಿದೆ. ಆದುದರಿಂದ ಸೇವೆ ಮಾಡಲು ಇಚ್ಛಿಸುವ ಭಕ್ತಾಧಿಗಳು ಆನ್‌ಲೈನ್ ಮೂಲಕ ಸೇವೆಗಳಿಗೆ ಹಣ ಸಂದಾಯ ಮಾಡಬಹುದು.

ದೇವಳಕ್ಕೆ ದೇಣಿಗೆ ನೀಡುವ ಭಕ್ತಾದಿಗಳು ದೇವಳದ ಉಳಿತಾಯ ಖಾತೆಗೆ ಹಣವನ್ನು ಜಮಾ ಮಾಡಬಹುದು. ಭಕ್ತರು ಸರಿಯಾದ ಅಂಚೆ ವಿಳಾಸವನ್ನು ನೀಡಬೇಕು. ಸ್ವೀಕೃತ ರಸೀದಿ ಮತ್ತು ಸೇವಾ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News