ಉಡುಪಿ ಜಿಲ್ಲೆಯಲ್ಲಿ ರವಿವಾರ 27 ಮದುವೆ ಕಾರ್ಯಕ್ರಮಕ್ಕೆ ಅನುಮತಿ

Update: 2020-05-23 15:36 GMT

ಉಡುಪಿ, ಮೇ 23: ರಾಜ್ಯಾದ್ಯಂತ ಇಂದು ಸಂಜೆಯಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು 36 ಗಂಟೆಗಳ ಕಾಲ ಸಂಪೂರ್ಣ ಲಾಕ್‌ಡೌನ್‌ನ್ನು ಸರಕಾರ ವಿಧಿಸಿದ್ದರೂ, ನಾಳೆ ನಡೆಯಲು ನಿಗದಿಯಾಗಿರುವ ಮದುವೆ ನಡೆಯಲು ವಿಶೇಷ ಅನುಮತಿಯೊಂದಿಗೆ ಅವಕಾಶ ನೀಡಿದೆ.

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 27 ಮದುವೆಗಳು ನಡೆಯಲು ನಿಗದಿಯಾಗಿವೆ. ಉಡುಪಿ ತಾಲೂಕಿನಲ್ಲಿ 4, ಕಾಪು-3, ಬ್ರಹ್ಮಾವರ-4, ಕುಂದಾಪುರ-4, ಬೈಂದೂರು-6 ಹಾಗೂ ಕಾರ್ಕಳದಲ್ಲಿ 6 ಮದುವೆಗಳು ನಡೆಯಲು ಅನುಮತಿಯನ್ನು ನೀಡಲಾಗಿದೆ. ಹೆಬ್ರಿ ತಾಲೂಕಿನಲ್ಲಿ ಯಾವುದೇ ಮದುವೆ ನಿಗದಿಯಾಗಿಲ್ಲ.

ಮದುವೆಯಲ್ಲಿ ಹೆಣ್ಣು ಮತ್ತು ಗಂಡಿನ ಕಡೆಯಿಂದ ಒಟ್ಟು 50 ಜನ ಸೇರಲು ಅವಕಾಶವಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News