ಉಡುಪಿ: ಝೆರಾಕ್ಸ್ ಅಂಗಡಿಯಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ

Update: 2020-05-23 15:45 GMT

ಉಡುಪಿ, ಮೇ 23: ನಗರದ ಪಿಪಿಸಿ ರಸ್ತೆಯ ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಸಂಪರ್ಕ್ ಝೆರಾಕ್ಸ್ ಅಂಗಡಿಯಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಅವಘಡದಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಶ್ರೀನಿವಾಸ್ ಎಂಬವರ ಮಾಲಕತ್ವದ ಸಂಪರ್ಕ್ ಝೆರಾಕ್ಸ್ ಅಂಗಡಿಯಲ್ಲಿ ಉಂಟಾದ ಶಾರ್ಟ್ ಸಕ್ಯೂರ್ಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಅಂಗಡಿಯೊಳಗಿನ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಹೋಗಿವೆ ಎಂದು ತಿಳಿದುಬಂದಿದೆ. ಈ ಅವಘಡದಿಂದ ಕಟ್ಟಡಕ್ಕೂ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು, ಸುಮಾರು ಎರಡು ಮೂರು ತಾಸುಗಳ ಕಾರ್ಯಾಚರಣೆಯ ಮೂಲಕ ಬೆಂಕಿ ನಂದಿಸಿದರು. ಇದಕ್ಕೆ ಒಟ್ಟು ಮೂರು ಅಗ್ನಿಶಾಮಕದಳದ ವಾಹನಗಳನ್ನು ಬಳಸಿ ಕೊಳ್ಳಲಾಗಿತ್ತು. ಸ್ಥಳದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ವೃತ್ತ ನಿರೀಕ್ಷಕ ಮಂಜುನಾಥ್ ಹಾಜರಿದ್ದರು. ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಕೋರ್ಟ್ ರಸ್ತೆಯ ವಾಹನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News