ಮೂಡುಬಿದಿರೆ: ರೋಟರಿ ಟೆಂಪಲ್‍ಟೌನ್‍ನಿಂದ ಸ್ಯಾನಿಟೈಸರ್ ಸಾಧನ ಕೊಡುಗೆ

Update: 2020-05-23 16:27 GMT

ಮೂಡುಬಿದಿರೆ: ಇಲ್ಲಿನ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಮೂಡುಬಿದಿರೆ ಪ್ರೆಸ್‍ಕ್ಲಬ್‍ಗೆ ಸ್ಯಾನಿಟೈಸರ್ ಸಾಧನವನ್ನು ಕೊಡುಗೆಯಾಗಿ ನೀಡಿದ್ದು, ರೋಟರಿ ಕ್ಲಬ್‍ನ ನಿಯೋಜಿತ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅವರು ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಅವರಿಗೆ ಶನಿವಾರ ಹಸ್ತಾಂತರಿಸಿದರು. 

ರೋಟರಿ ಕ್ಲಬ್‍ನ ಝೋನಲ್ ಲೆಫ್ಟಿನೆಂಟ್ ಬಲರಾಮ ಕೆ.ಎಸ್, ರೋಟರಿ ಟೆಂಪಲ್ ಟೌನ್ ಕಾರ್ಯದರ್ಶಿ ಪೂರ್ಣಚಂದ್ರ ಜೈನ್, ಕೋಶಾಧಿಕಾರಿ ವಿಠಲ ಪೂಜಾರಿ, ನಿಕಟಪೂರ್ವ ಕಾರ್ಯದರ್ಶಿ ಹರೀಶ್ ಎಂ.ಕೆ ಹಾಗೂ ಪ್ರೆಸ್‍ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಮೂಡುಬಿದಿರೆ ಪ್ರೆಸ್‍ಕ್ಲಬ್‍ಗೆ ಸ್ಯಾನಿಟೈಸರ್ ಸಾಧನವನ್ನು ಹಸ್ತಾಂತರಿಸಲಾಯಿತು. ಟೆಂಪಲ್‍ಟೌನ್ ಕ್ಲಬ್‍ನ ನಿಯೋಜಿತ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News