ಕೋವಿಡ್-19 ಲಸಿಕೆಯ ಮಾನವ ಪ್ರಯೋಗ ಆರಂಭ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ

Update: 2020-05-23 17:40 GMT
ಸಾಂದರ್ಭಿಕ ಚಿತ್ರ

ಲಂಡನ್, ಮೇ 23: ತನ್ನ ಕೊರೋನ ವೈರಸ್ ಲಸಿಕೆಯ ಮುಂದಿನ ಹಂತದ ಮಾನವ ಪ್ರಯೋಗಕ್ಕಾಗಿ ಸಾವಿರಾರು ಸ್ವಯಂಸೇವಕರನ್ನು ನೇಮಿಸಿಕೊಳ್ಳುತ್ತಿರುವುದಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಶುಕ್ರವಾರ ಹೇಳಿದೆ.

ಮಾದರಿ ಲಸಿಕೆಯನ್ನು ನೀಡುವ ವಯೋ ಗುಂಪನ್ನು ವಿಸ್ತರಿಸಲಾಗಿದ್ದು, ಸುಮಾರು 10,260 ವಯಸ್ಕರು ಮತ್ತು ಮಕ್ಕಳನ್ನು ಪ್ರಯೋಗಕ್ಕೆ ಆರಿಸಲಾಗಿದೆ ಹಾಗೂ ಇದಕ್ಕಾಗಿ ಬ್ರಿಟನ್‌ನಾದ್ಯಂತ ಹಲವಾರು ಭಾಗೀದಾರ ಸಂಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ಅದು ತಿಳಿಸಿದೆ.

ದಕ್ಷಿಣ ಮಧ್ಯ ಇಂಗ್ಲೆಂಡ್‌ನಲ್ಲಿರುವ ವಿಶ್ವವಿದ್ಯಾನಿಲಯವು ಎಪ್ರಿಲ್‌ನಲ್ಲಿ ಆರಂಭಿಕ ಪ್ರಯೋಗಗಳನ್ನು ಆರಂಭಿಸಿದೆ. ಆಗ 1,000ಕ್ಕೂ ಅಧಿಕ ಮಂದಿಗೆ ಲಸಿಕೆ ಕೊಡಲಾಗಿತ್ತು. ಆ ಪ್ರಯೋಗದ ಮುಂದಿನ ಭಾಗವನ್ನು ಈಗ ಕೈಗೆತ್ತಿಕೊಳ್ಳಲಾಗಿದೆ.

ಕ್ಲಿನಿಕಲ್ ಅಧ್ಯಯನಗಳು ಉತ್ತಮವಾಗಿ ಸಾಗುತ್ತಿವೆ ಎಂದು ಆಕ್ಸ್‌ಫರ್ಡ್ ಲಸಿಕೆ ಗುಂಪಿನ ಮುಖ್ಯಸ್ಥ ಆ್ಯಡ್ರೂ ಪೊಲಾರ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News