ಉಡುಪಿ: ಮನೆಗಳಲ್ಲಿ ಸರಳ ಈದ್ ಉಲ್ ಫಿತರ್ ಹಬ್ಬ

Update: 2020-05-24 03:54 GMT

ಉಡುಪಿ, ಮೇ 24: ಕೋವಿಡ್ 19  ಲಾಕ್ ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಇಂದು ಈದ್ ಉಲ್ ಫಿತರ್ ಹಬ್ಬವನ್ನು ಮುಸ್ಲಿಮರು ತಮ್ಮ ಮನೆಗಳಲ್ಲಿ ಸರಳವಾಗಿ ಆಚರಿಸಿದರು.

ಕುಟುಂಬದವರೆಲ್ಲ ಒಟ್ಟುಸೇರಿ ಮನೆಯಲ್ಲಿಯೇ ಹಬ್ಬದ ವಿಶೇಷ ನಮಾಜನ್ನು ನಿರ್ವಹಿಸಿ ಬಳಿಕ ಪರಸ್ಪರ ಶುಭಾಶಯ ಕೋರಿದರು. 
ಮಸೀದಿಯಲ್ಲಿ ಈದ್ ನಮಾಜ್ ನಿರ್ವಹಿಸಲು ಅವಕಾಶ ಇಲ್ಲದ ಕಾರಣ ಉಡುಪಿ ಜಾಮಿಯಾ ಮಸೀದಿಯಿಂದ ಈದ್ ಸಂದೇಶವನ್ನು ಸ್ಥಳೀಯ  ಚಾನೆಲ್ ಹಾಗೂ ಯೂಟ್ಯೂಬ್ ಮೂಲಕ ನೇರಪ್ರಸಾರದ ಮೂಲಕ ನೀಡಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News