×
Ad

ಮಾರುತಿ ಸುಝುಕಿ ಉದ್ಯೋಗಿಗೆ ಕೋವಿಡ್-19 ಪಾಸಿಟಿವ್

Update: 2020-05-24 10:12 IST

ಹೊಸದಿಲ್ಲಿ, ಮೇ 24: ಮಾನೆಸರ್‌ನಲ್ಲಿರುವ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಝಕಿಯ ಸ್ಥಾವರದಲ್ಲಿರುವ ಉದ್ಯೋಗಿಯೊಬ್ಬರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಕಂಪೆನಿ ಶನಿವಾರ ತಿಳಿಸಿದೆ.

ಸಂಪರ್ಕಕ್ಕೆ ಬರಬಹುದಾದ ಎಲ್ಲ ಉದ್ಯೋಗಿಗಳಿಗೆ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ.

ಉದ್ಯೋಗಿ ವಾಸಿಸುವ ಪ್ರದೇಶ ಕಂಟೈನ್‌ಮೆಂಟ್ ವಲಯಕ್ಕೆ ಸೇರುವ ಮೊದಲು ಮೇ 15ರಂದು ಕೊನೆಯ ಬಾರಿ ಕಂಪೆನಿಯಲ್ಲಿ ಕೆಲಸ ಮಾಡಿದ್ದರು.

ಮಾರುತಿ ಸುಝುಕಿ ಕಳೆದ ವಾರ ತನ್ನ ಉತ್ಪಾದನೆಯನ್ನು ಆರಂಭಿಸಿತ್ತು. ಕೊರೋನ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಾರ್ಚ್‌ನಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಮಾರುತಿ ಸುಝುಕಿ ಕೂಡ ತನ್ನ ಕೆಲಸವನ್ನು ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News