ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಪ್ರತಿಭಟಿಸಿದ್ದ ಇಬ್ಬರು ಜೆಎನ್‌ಯು ವಿದ್ಯಾರ್ಥಿನಿಯರ ಬಂಧನ

Update: 2020-05-24 06:56 GMT

 ಹೊಸದಿಲ್ಲಿ, ಮೇ 24: ಮೂರು ತಿಂಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ವಿರುದ್ಧ್ದ ಜಾಫ್ರಾಬಾದ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಭಾಗವಹಿಸಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರನ್ನು ಶನಿವಾರ ಬಂಧಿಸಲಾಗಿದೆ. ಸಿಎಎಗೆ ಸಂಬಂಧಿಸಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.

ಈಶಾನ್ಯ ದಿಲ್ಲಿಯ ಜಾಫ್ರಾಬಾದ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುವುದಕ್ಕೆ ಮುಂಚಿತವಾಗಿ ಫೆಬ್ರವರಿಯಲ್ಲಿ ಬಿಜೆಪಿಯ ಕಪಿಲ್ ಮಿಶ್ರಾ ಪೌರತ್ವ ಪರ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಆ ರ್ಯಾಲಿಯ ಮರುದಿನವೇ ರಾಷ್ಟ್ರ ರಾಜಧಾನಿಯಲ್ಲಿ ಘರ್ಷಣೆ ನಡೆದಿದ್ದವು.

ಮಹಿಳಾ ಕಾಲೇಜು ವಿದ್ಯಾರ್ಥಿಗಳ ಹಕ್ಕಿಗಾಗಿ ಕೆಲಸ ಮಾಡುತ್ತಿರುವ ದಿಲ್ಲಿ ಮೂಲದ ಪಿಂಜ್ರಾ ಟೋಡ್ ಗುಂಪಿಗೆ ಸೇರಿರುವ ನಟಾಶಾ ಹಾಗೂ ದೇವಾಂಗನಾ ಎಂಬುವವರನ್ನು ಬಂಧಿಸಲಾಗಿದೆ. ಈ ಇಬ್ಬರು ಫೆಬ್ರವರಿಯಲ್ಲಿ ಜಾಫ್ರಾಬಾದ್‌ನ ಮೆಟ್ರೊ ಸ್ಟೇಶನ್‌ನಲ್ಲಿ ನಡೆದ ಮಹಿಳೆಯರ ಬೃಹತ್ ಪ್ರತಿಭಟನೆಗೆ ಸಾಥ್ ನೀಡಿದ್ದರು.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 196 ಹಾಗೂ 353ರ ಅಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News