ಈದುಲ್ ಫಿತ್ರ್ ಮಾನವೀಯ ಸಂಬಂಧಗಳನ್ನು ಸದೃಢಗೊಳಿಸಲಿ

Update: 2020-05-24 07:33 GMT

ಮಂಗಳೂರು, ಮೇ. 24: ನಿರಂತರ ಮೂವತ್ತು ದಿನಗಳ ವೃತಾನುಷ್ಠಾನ ಮೂಲಕ ಮಾನವೀಯ ನೆಲೆಯಲ್ಲಿ, ಸರ್ವರಿಗೂ ಸಮಾನವಾಗಿರುವ, ಹಸಿವು, ಬಾಯಾರಿಕೆ ಮತ್ತು ಆದನ್ನು ತಾಳ್ಮೆಯಿಂದ ಸಹಿಸುವ ಸಹನೆಯ ತರಬೇತಿಯನ್ನು ಕಲಿಸುವ ರಮಝಾನ್ ಅಂತ್ಯದಲ್ಲಿ ಪ್ರಸಕ್ತವಾಗುವ ಈದುಲ್ ಫಿತ್ರ್ ಹಬ್ಬವು ಮಾನವೀಯ ಸಂಬಂಧಗಳನ್ನು ಸದೃಢಗೊಳಿಸಲಿ ಬ್ಯಾರೀಸ್  ಛೇಂಬರ್ ಆಪ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷರಾದ ಜನಾಬ್ ಎಸ್. ಎಂ.ರಶೀದ್ ಹಾಜಿ ಶುಭ ಕೋರಿದ್ದಾರೆ.

ಸಮಾಜದಲ್ಲಿನ ಸರ್ವಜನತೆಗೂ, ಮಾನವೀಯ ಮೌಲ್ಯದ ಸೌಹಾರ್ಧತೆ, ಸಮಾನತೆ ಮತ್ತು ಸಾಹೋದರ್ಯತೆಯಲ್ಲಿ  ಐಕ್ಯತೆಯೊಂದಿಗೆ ಬದುಕುವ ಸಂಪನ್ನತೆಯನ್ನು ನೀಡಲಿ ಮತ್ತು ಎಲ್ಲಾ ಒಳಿತುಗಳಲ್ಲಿ ಸಕಲರೂ ಒಂದಾಗಿ ಸಹಭಾಗಿಗಳಾಗಿ ಎಲ್ಲಾ  ಸಾಮಾಜಿಕ ಕೆಡುಕುಗಳನ್ನು ಹಾಗೂ ಪ್ರಾಕೃತಿಕ ವಿಕೋಪಗಳನ್ನು ಒಗ್ಗಟ್ಟಿನಲ್ಲಿ ಎದುರಿಸಿ ನಮ್ಮ ಸಮಾಜವನ್ನು ಅಭ್ಯುದಯದೆಡೆಗೆ ಮುನ್ನಡೆಸಲು ಸೃಷ್ಟಿಕರ್ತನು ಅನುಗ್ರಹಿಸಲಿ ಎಂಬುದಾಗಿ ರಶೀದ್ ಹಾಜಿ ಶುಭ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News