ಮಂಜೇಶ್ವರ: ಸರಳ " ಈದುಲ್ ಫಿತ್ರ್ " ಆಚರಣೆ

Update: 2020-05-24 09:55 GMT

ಮಂಜೇಶ್ವರ, ಮೇ 24: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಸರಕಾರ ನೀಡಿದ ಅಲ್ಪ ರಿಯಾಯಿತಿಯನ್ನು ದುರುಪಯೋಗಪಡಿಸದೆ ರವಿವಾರ ಮಂಜೇಶ್ವರದಲ್ಲಿ  ಮುಸ್ಲಿಮರು ಅತ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಿದರು.

ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಯಾರು ಮಸೀದಿಗೆ ತೆರಳದೆ ಬಹುತೇಕ ಮನೆಗಳಲ್ಲೂ ಕುಟುಂಬದ ಯಜಮಾನನ ನೇತೃತ್ವದಲ್ಲಿ ಅವರವರ ಮನೆಯಲ್ಲೇ ಈದ್ ನಮಾಜ್ ನಿರ್ವಹಿಸಿದರು. ಸಾರ್ವಜನಿಕವಾಗಿ ತಕ್ಬೀರ್ ಧ್ವನಿ ಮೊಳಗಿಸದೆ, ಖಬರ್ ಸ್ಥಾನವನ್ನು ಸಂದರ್ಶಿಸದೆ ಮೌನವಾಗಿಯೇ ಈದ್ ಹಬ್ಬವನ್ನು ಆಚರಿಸಿ ಮಾದರಿಯಾಗಿದ್ದಾರೆ.

ಪಿಡಿಪಿ ರಾಜ್ಯ ಸಮಿತಿ ಕಾರ್ಯದರ್ಶಿ ಎಸ್ ಎಂ ಬಶೀರ್ ರವರ ಮನೆಯಲ್ಲಿ ಬಶೀರ್ ರವರೇ ಖುತ್ಬಾ ನಿರ್ವಹಿಸಿ ನಮಾಜ್ ಗೆ ಅವರೇ ನೇತೃತ್ವ ನೀಡಿ  ಕುಟುಂಬದೊಂದಿಗೆ  ಈದ್ ನಮಾಜ್ ನಿರ್ವಹಿಸಿದ್ದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಯ್ತು.

ಬಹುತೇಕ ಮಂದಿ ಹಳೆಯದಾದ ಸಾದಾ ಬಟ್ಟೆಯನ್ನೇ ಧರಿಸಿ  ಕೆಲವೊಂದು ಮಂದಿ ಮುಂಚೆಯೇ  ಖರೀದಿಸಿದ್ದ ಹೊಸ ಬಟ್ಟೆಯನ್ನು ಧರಿಸಿ ಸರಳತೆ ಮೆರೆದರು. ಬಟ್ಟೆ ಬರೆಗಳಿಗಾಗಿ ಮೀಸಲಿಟ್ಟ ಹಣವನ್ನು ಕೋವಿಡ್ ಲಾಕ್ ಡೌನ್ ಸಂಧಿಗದಾವಸ್ಥೆಯಲ್ಲಿ ಸಿಲುಕಿದವರಿಗೆ ಸಹಾಯ ಹಸ್ತ ಚಾಚಿ ಮಾದರಿಯಾದರು. ರಂಜಾನ್ ಉಪವಾಸ ಪೂರ್ತಿಯಾಗುವ ಫಿತರ್ ಝಕಾತನ್ನು ಸಾಮಾಜಿಕ ಅಂತರವನ್ನು ಪಾಲಿಸಿ  ಫಲಾನುಭವಿಗಳ ಮನೆಗಳಿಗೆ ತಲುಪಿಸಿರುವುದು ವಿಶೇಷತೆಯಾಗಿತ್ತು.ಕೇರಳ ಮುಖ್ಯ ಮಂತ್ರಿಯವರು ಸಂಪೂರ್ಣ ಲಾಕ್ ಡೌನ್ ನಿಂದ ಅಲ್ಪ  ರಿಯಾಯಿತಿಯನ್ನು ನೀಡಿದ್ದರೂ ಇದನ್ನು ದುರುಪಯೋಗಪಡಿಸದೆ ಮಂಜೇಶ್ವರದ ಜನತೆ ಕಾನೂನುಪಾಲಕರ ಪ್ರಶಂಸೆಗೂ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News