ಉಡುಪಿ: ರವಿವಾರ 18 ಪಾಸಿಟಿವ್ ಪ್ರಕರಣ ಪತ್ತೆ

Update: 2020-05-24 09:09 GMT

ಉಡುಪಿ, ಮೇ 24: ಉಡುಪಿ ಜಿಲ್ಲೆಯಲ್ಲಿ ರವಿವಾರ ಅಪರಾಹ್ನದ ವೇಳೆಗೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಒಟ್ಟು 18 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಇವರಲ್ಲಿ 13 ಮಂದಿ ಮಹಾರಾಷ್ಟ್ರ ರಾಜ್ಯದ ವಿವಿದೆಡೆಗಳಿಂದ ಜಿಲ್ಲೆಗೆ ಮರಳಿದವರಾದರೆ, ಇಬ್ಬರು ಕಂಟೈನ್‌ಮೆಂಟ್ ರೆನ್‌ನಲ್ಲಿ ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ಇಬ್ಬರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಇವರಲ್ಲಿ ಹತ್ತು ವರ್ಷ ಪ್ರಾಯದೊಳಗಿನ ಮೂವರು ಗಂಡು ಮಕ್ಕಳಿದ್ದು, ಮೂವರು ಮುಂಬಯಿಯಿಂದ ತಮ್ಮ ಹೆತ್ತವರೊಂದಿಗೆ ಬಂದವರು. ಉಳಿದಂತೆ ಎಂಟು ಮಂದಿ ಪುರುಷರು ಹಾಗೂ ಏಳು ಮಂದಿ ಮಹಿಳೆಯರು ಕೊರೋನ ಸೋಂಕಿಗೆ ತುತ್ತಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು 35ರ ಹರೆಯದ ಮಹಿಳೆ (ಪಿ 1961), 22ರ ಮಹಿಳೆ (2045), 24ರ ಮಹಿಳೆ (2048), 35ರ ಮಹಿಳೆ (2049), 29ರ ಮಹಿಳೆ (2053), 23ರ ಮಹಿಳೆ (2055), 29ರ ಮಹಿಳೆ (2056)ಯಲ್ಲಿ ಅಲ್ಲದೇ 51 ವರ್ಷ ಪ್ರಾಯದ ಪುರುಷ (2040), 41ರ ಪುರುಷ (2041), 32ರ ಪುರುಷ (2042), 50ರ ಪುರುಷ (2044),37ರ ಪುರುಷ (2046), 26ರ ಪುರುಷ (2047), 29ರ ಪುರುಷ (2051) ಹಾಗೂ 48 ವರ್ಷ ಪ್ರಾಯದ ಪುರುಷ (2054)ನಲ್ಲಿ ಸೋಂಕು ಪತ್ತೆಯಾಗಿದೆ.
ಉಳಿದಂತೆ 4 ವರ್ಷ ಪ್ರಾಯದ ಗಂಡು ಮಗು (2043), ಒಂದು ವರ್ಷದ ಗಂಡುಮಗು (2050) ಹಾಗೂ 4ವರ್ಷ ಪ್ರಾಯದ ಗಂಡುಮಗು (2052) ವಿನಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News