​ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 5 ಮಂದಿಗೆ ಕೊರೋನ ಪಾಸಿಟಿವ್

Update: 2020-05-24 14:08 GMT

ಕಾಸರಗೋಡು, ಮೇ.24: ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 5 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.

ಸೋಂಕು ಖಚಿತಗೊಂಡವರೆಲ್ಲ ಮಹಾರಾಷ್ಟ್ರದಿಂದ ಆಗಮಿಸಿದವರು. 41 ವರ್ಷ ಪ್ರಾಯದ ಕುಂಬಳೆ ನಿವಾಸಿ, 32 ವರ್ಷದ ಮಂಗಲ್ಪಾಡಿ ನಿವಾಸಿ, 44 ಮತ್ತು 47 ವರ್ಷ ಪ್ರಾಯದ ಪೈವಳಕೆ ನಿವಾಸಿಗಳು, 60 ವರ್ಷದ ವರ್ಕಾಡಿ ನಿವಾಸಿಗಳಿಗೆ ಸೋಂಕು ಪಾಸಿಟಿವ್ ಬಂದಿದೆ.

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆ ಮತ್ತು ಕುಂಬಳೆ ನಿವಾಸಿ 41 ವರ್ಷದ ವ್ಯಕ್ತಿ ಗುಣಮುಖರಾದವರು. ಇವರಲ್ಲಿ ಕುಂಬಳೆ ನಿವಾಸಿ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಸೋಂಕು ತಗಲಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು. 

ಜಿಲ್ಲೆಯಲ್ಲಿ 3,020 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2,481 ಮಂದಿ, ಆಸ್ಪತ್ರೆಗಳಲ್ಲಿ 539 ಮಂದಿ ನಿಗಾದಲ್ಲಿದ್ದಾರೆ. 104 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.  

ಜಿಲ್ಲೆಯಲ್ಲಿ 6,199 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5,434 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 367 ಮಂದಿಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News