ನಿಸ್ಮಾ ಇಂಪೊರ್ಟ್ ಮತ್ತು ಎಕ್ಸ್ ಪೋರ್ಟ್ ವತಿಯಿಂದ ಬಡವರು, ವಲಸಿಗರಿಗೆ ಆಹಾರ ವಿತರಣೆ

Update: 2020-05-25 06:29 GMT

ಮುಲ್ಕಿ: ಲಾಕ್ ಡೌನ್ ಹಾಗೂ ಈದುಲ್ ಫಿತ್ರ್ ಪ್ರಯುಕ್ತ ನಿಸ್ಮಾ ಇಂಪೊರ್ಟ್ ಮತ್ತು ಎಕ್ಸ್ ಪೋರ್ಟ್ ವತಿಯಿಂದ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಬಡವರು, ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ನಿಸ್ಮಾ ಇಂಪೊರ್ಟ್ ಮತ್ತು ಎಕ್ಸ್ ಪೋರ್ಟ್ ವತಿಯಿಂದ ಹೈದರಾಲಿ ಮತ್ತು ಅವರ ಸಹಪಾಠಿ ಎಮ್. ಕೆ ಮಹಮ್ಮದ್ ಅಲಿ, ಎಮ್. ಕೆ ಇನಾಯತ್ ಮತ್ತು ಎಮ್.ಕೆ ಇಮ್ತಿಯಾಝ್ ರವರ ನೇತೃತ್ವದಲ್ಲಿ ದುಬೈ ಮತ್ತು ಸೌದಿ ಅರೇಬಿಯಾ ಅನಿವಾಸಿ ಕನ್ನಡಿಗರ ಸಹಾಯದಿಂದ ಮುಲ್ಕಿ, ವೇಣೂರು, ಕಕ್ಕಿಂಜೆ, ಚಾರ್ಮಡಿ ಸಮೀಪದ ತೀರಾ ಸಂಕಷ್ಟದಲ್ಲಿದ್ದ ಹಾಗೂ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಬಡವರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News