ಮಂಗಳೂರು: ಪ್ರಯಾಣಿಕರ ಕೊರತೆಯಿಂದಾಗಿ ಕೆಲ ವಿಮಾನಗಳ ಹಾರಾಟ ರದ್ದು

Update: 2020-05-25 06:28 GMT

ಮಂಗಳೂರು, ಮೇ 24: ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಿ ಇಂದಿನಿಂದ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ದೊರಕಿದೆ. ಹಾಗಿದ್ದರೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಕೆಲವು ವಿಮಾನಗಳ ಹಾರಾಟವನ್ನು ರದ್ದುಪಡಿಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಇಂದು ಮುಂಬೈ ಮತ್ತು ಚೆನ್ನೈ ಹಾಗೂ ಬೆಂಗಳೂರಿಗೆ ನಿರ್ಗಮನ ಹಾಗೂ ಆಗಮನ ನಡೆಸಲಿದ್ದ ಇಂಡಿಗೋ ಹಾಗೂ ಸ್ಪೈಸ್ ಜೆಟ್‌ನ ಆರು ಯಾನಗಳು ರದ್ದುಗೊಂಡಿವೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಎಸ್‌ಜಿ 1035/ ಎಸ್‌ಜಿ 1027- ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಆಗಮನ ಹಾಗೂ 10.20ಕ್ಕೆ ನಿರ್ಗಮಿಸಬೇಕಾಗಿದ್ದ ಯಾನ ರದ್ದು ಗೊಂಡಿದೆ. ಮುಂಬೈನಿಂದ ಬೆಳಗ್ಗೆ 8.35ಕ್ಕೆ ಆಗಮನ ಹಾಗೂ 9.05ಕ್ಕೆ ನಿರ್ಗಮನಕ್ಕೆ ನಿಗದಿಯಾಗಿದ್ದ ಎಸ್‌ಜಿ356/ಎಸ್‌ಜಿ 353 ವಿಮಾನ ಹಾರಾಟವೂ ರದ್ದುಗೊಂಡಿದೆ. ಇದೇ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ ಇಂಡಿಗೋದ ಮುಂಬೈ ವಿಮಾನ 6ಇ5327/6ಇ5328 ಹಾರಾಟವೂ ರದ್ದು ಗೊಂಡಿದೆ. ಸ್ಪೈಸ್ ಜೆಟ್‌ನಿಂದ ಸಂಜೆಯ ಬೆಂಗಳೂರಿನ ವಿಮಾನ ಹಾರಾಟದ ಕುರಿತಂತೆ ಸದ್ಯ ಕಾರ್ಯ ನಿರ್ವಹಿಸಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News