×
Ad

ಕಾಸರಗೋಡು : ಇಂದು 14 ಮಂದಿಗೆ ಕೊರೋನ ಸೋಂಕು ದೃಢ

Update: 2020-05-25 18:48 IST

ಕಾಸರಗೋಡು :  ಜಿಲ್ಲೆಯಲ್ಲಿ ಸೋಮವಾರ 14 ಮಂದಿಗೆ ಕೊರೋನ  ಸೋಂಕು ದೃಢಪಟ್ಟಿದ್ದು, 6 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಸೋಂಕು ಖಚಿತಗೊಂಡವರಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರು. ಒಬ್ಬರು ಕೊಲ್ಲಿ ರಾಷ್ಟ್ರದಿಂದ ಬಂದವರು. ಕೊಲ್ಲಿರಾಷ್ಟ್ರದಿಂದ ಆಗಮಿಸಿದ 38 ವರ್ಷ ಪ್ರಾಯದ ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರ ದಿಂದ ಆಗಮಿಸಿದವರಲ್ಲಿ 8 ಮಂದಿ ಕುಂಬಳೆ ನಿವಾಸಿಗಳು, ಇಬ್ಬರು ವರ್ಕಾಡಿ ನಿವಾಸಿಗಳು, ವರ್ಕಾಡಿ, ಮೀಂಜ, ಉದುಮಾ, ಕುಂಬಡಾಜೆ ನಿವಾಸಿಗಳಾದ ತಲಾ ಒಬ್ಬರು ಸೋಂಕು ತಗುಲಿದವರು. ಇವರಲ್ಲಿ 6 ಮಂದಿ ಮೇ 18ರಂದು ಮುಂಬೈಯಿಂದ ಆಗಮಿಸಿದವರು. ಇವರು ಕುಂಬಳೆ ನಿವಾಸಿಗಳಾದ 57, 62, 52, 60, 26 ವರ್ಷದವರು. ಕುಂಬಡಾಜೆ ನಿವಾಸಿ 52 ವರ್ಷ ಪ್ರಾಯದವರು. ಪುಣೆಯಿಂದ ಆಗಮಿಸಿದ 33, 45 ವರ್ಷದವರಿಗೆ ಸೋಂಕು ಖಚಿತವಾಗಿದೆ.

ಮುಂಬೈಯಿಂದ ಬಂದ 30, 47 ವರ್ಷದ ಸಹೋದರರಿಗೆ, 54 ವರ್ಷದ ವರ್ಕಾಡಿ ನಿವಾಸಿಗೆ, 50 ವರ್ಷದ ಮೀಂಜ ನಿವಾಸಿಗೆ, ಬೆಂಗಳೂರಿ ನಿಂದ ಆಗಮಿಸಿದ 38 ವರ್ಷದ ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ.

ಜಿಲ್ಲೆಯಲ್ಲಿ ಸೋಮವಾರ 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ನಗರಸಭೆಯ ನಿವಾಸಿ 66 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು, ಕಳ್ಳಾರ್ ನಿವಾಸಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3180 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2589 ಮಂದಿ, ಆಸ್ಪತ್ರೆಗಳಲ್ಲಿ 591 ಮಂದಿ ನಿಗಾದಲ್ಲಿದ್ದಾರೆ. 213 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 6217 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5617 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 184 ಮಂದಿಯ ಫಲಿತಾಂಶ ಲಭಿಸಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News