ಉಡುಪಿ ಜಿಪಂ ಸಿಬ್ಬಂದಿಯ ಮನೆ ಪರಿಸರ ಸೀಲ್‌ಡೌನ್‌ಗೆ ಸಿದ್ಧತೆ

Update: 2020-05-25 16:52 GMT

ಕಾಪು, ಮೇ 25: ಉಡುಪಿ ಜಿಪಂ ಸಿಬ್ಬಂದಿ, ಕಟಪಾಡಿ ಗ್ರಾಪಂ ವ್ಯಾಪ್ತಿಯ ಮೂಡಬೆಟ್ಟು ಸರಕಾರಿಗುಡ್ಡೆಯ ವ್ಯಕ್ತಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲು ಕಾಪು ತಾಲೂಕು ಅಧಿಕಾರಿಗಳು ಇಂದು ಸಂಜೆಯಿಂದ ಪೂರ್ವಸಿದ್ಧತೆ ನಡೆಸುತ್ತಿದ್ದಾರೆ.

ಕಾಪು ತಾಲೂಕು ವ್ಯಾಪ್ತಿಯಲ್ಲಿ ಸ್ಥಳಿಯವಾಗಿ ಕಾಣಸಿಕೊಂಡ ಪ್ರಥಮ ಪ್ರಕರಣ ಇದಾಗಿದ್ದು, ಸೋಂಕಿನ ಮೂಲದ ಬಗ್ಗೆ ಜಿಲ್ಲಾಡಳಿತ ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದೆ. ಈ ಮಧ್ಯೆ ಇಂದು ಸಂಜೆ ಸೋಂಕಿತ ವ್ಯಕ್ತಿಯ ಮನೆ ಇರುವ ಸರಕಾರಿಗುಡ್ಡೆಗೆ ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸರಕಾರಿಗುಡ್ಡೆ ವಸತಿ ಪ್ರದೇಶ ವನ್ನು 15 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ತಹ ಶೀಲ್ದಾರ್ ಮುಹಮ್ಮದ್ ಇಸಾಕ್, ಸೀಲ್‌ಡೌನ್ ಆದೇಶ ಹೊರಡಿಸಿರುವ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ. ಆದುದರಿಂದ ಈವರೆಗೆ ಸೀಲ್‌ಡೌನ್ ಆದೇಶವನ್ನು ಹೊರಡಿಸಿಲ್ಲ. ಒಂದು ವೇಳೆ ಸೀಲ್‌ಡೌನ್ ಆದರೂ ಸ್ಥಳೀಯರಿಗೆ ಅಗತ್ಯ ಜೀವನಾವಶ್ಯಕ ಸಾಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News