ಡಿಕೆಎಸ್‌ಸಿಯಿಂದ ಬಡವರಿಗೆ 2500 ಆಹಾರದ ಕಿಟ್ ವಿತರಣೆ

Update: 2020-05-25 17:30 GMT

ಕಾಪು, ಮೇ 25: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನ ಸಂಸ್ಥೆಯಾದ ಮೂಳೂರು ಅಲ್ ಇಹ್ಸಾನ್ ಎಜ್ಯುಕೇಶನ್ ಸೆಂಟರ್ ಮತ್ತು ಡಿಕೆಎಸ್‌ಸಿ ಬೆಳ್ಳಿಹಬ್ಬ ಆಚರಣಾ ಸ್ವಾಗತ ಸಮಿತಿಯ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ಬಡ, ನಿರ್ಗತಿಕರಿಗೆ ಜಾತಿ, ಮತ ಬೇಧ ಇಲ್ಲದೆ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ 2500 ಆಹಾರದ ಕಿಟ್ ರವಿವಾರ ವಿತರಿಸಲಾಯಿತು.

ಕಾಪು ತಾಲೂಕಿನ ಕ್ವಾರಂಟೇನ್ ಸೆಂಟರ್‌ಗಳಲ್ಲಿರುವವರಿಗೆ ಸಿಹಿ ತಿಂಡಿ ಮತ್ತು ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಈದುಲ್ ಫಿತ್‌ರ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ನೆರವೇರಿಸಿದರು.

ಸಂಸ್ಥೆಯ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ ಮಾತನಾಡಿ, ಕೊರೋನ ರೋಗಿಯ ಬಗ್ಗೆ ತಾರತಮ್ಯ ಮಾಡದೆ ರೋಗದ ವಿರುದ್ಧ ಪ್ರತಿಯೊಬ್ಬರು ಹೋರಾಟ ಮಾಡಬೇಕಾಗಿದೆ. ರೋಗಕ್ಕೆ ಜಾತಿ, ಧರ್ಮದ ಎಂಬ ಬೇಧ ಇರು ವುದಿಲ್ಲ. ನಮ್ಮ ದೇಶಕ್ಕೆ ಬಂದೆರಗಿದ ಈ ರೋಗದ ನಿರ್ಮೂಲನಕ್ಕೆ ಸರ್ವ ಜಾತಿ ಧರ್ಮವರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ, ಕಂದಾಯ ನಿರೀಕ್ಷಕ ರವಿಶಂಕರ್, ಕಾಪು ಠಾಣಾಧಿಕಾರಿ ರಾಜಶೇಖರ್ ಸಾಗ ನೂರು, ಸಂಸ್ಥೆಯ ಕಾರ್ಯದರ್ಶಿ ವೈ.ಬಿ.ಸಿ.ಬಶೀರ್ ಅಲಿ, ಪ್ರಾಂಶುಪಾಲ ಹಬೀಬುರ್ರಹ್ಮಾನ್ ಕೆ.ಎಸ್., ಪಿಆರ್‌ಓ ಬಶೀರ್ ಎಂ.ಮೂರುಗೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News