ದಿಲ್ಲಿಯ ಸ್ಲಂನಲ್ಲಿ ಅಗ್ನಿ ಅನಾಹುತ: 1500 ಗುಡಿಸಲು ಭಸ್ಮ

Update: 2020-05-26 04:42 GMT

ಹೊಸದಿಲ್ಲಿ,ಮೇ 26: ಆಗ್ನೇಯ ದಿಲ್ಲಿಯ ತುಘಲಕ್‌ಬಾದ್ ಪ್ರದೇಶದಲ್ಲಿರುವ ಕೊಳಚೆಗೇರಿಯಲ್ಲಿ ಸೋಮವಾರ ರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ.

ರಾತ್ರಿ 12:50ಕ್ಕೆ ಅಗ್ನಿ ಅನಾಹುತದ ಮಾಹಿತಿ ಪಡೆದ ಅಗ್ನಿ ಶಾಮಕ ದಳದ 28 ಯಂತ್ರಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

 ಸ್ಲಂ ನಿವಾಸಿಗಳು ಘಟನೆಯ ವೇಳೆ ನಿದ್ರೆಯಲ್ಲಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿಗಳು ಜನರನ್ನು ಎಬ್ಬಿಸಿ ಬೇರೆಡೆ ಸಾಗಿಸಲು ನೆರವಾದರು.

 ಬೆಂಕಿಯನ್ನು ಬೆಳಗ್ಗೆ 3:40ಕ್ಕೆ ತಹಬಂದಿಗೆ ತರಲಾಗಿದ್ದು, ಆದರೆ, ಅಷ್ಟರೊಳಗೆ,ಸುಮಾರು 1,500 ಗುಡಿಸಲುಗಳು ಬೆಂಕಿಗಾಹುತಿಯಾಗಿದ್ದವು. ಹೀಗಾಗಿ ಹಲವು ಜನರು ಮನೆ ಕಳೆದುಕೊಂಡಿದ್ದಾರೆ. ಸರಕಾರವು ಇದೀಗ ನಷ್ಟದ ಅಂದಾಜು ನಡೆಸುತ್ತಿದೆ.

ತುಘಲಕ್‌ನಗರ ಪ್ರದೇಶದಲ್ಲಿರುವ ಸ್ಲಂಗಳಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯು ನಮಗೆ ರಾತ್ರಿ 1 ಗಂಟೆಗೆ ತಲುಪಿತು. ಎಲ್ಲ ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿದೆವು. ಸುಮಾರು 1ರಿಂದ 2 ಸಾವಿರ ಗುಡಿಸಲುಗಳಿಗೆ ಬೆಂಕಿ ತಗಲಿದೆ ಎಂದು ಆಗ್ನೇಯ ದಿಲ್ಲಿಯ ಪೊಲೀಸ್ ಉಪ ಆಯುಕ್ತ ರಾಜೇಂದ್ರ ಪ್ರಸಾದ್ ಮೀನಾ ಹೇಳಿದ್ದಾರೆ.

ಬೆಂಕಿ ತಗಲಿದೆ ತಕ್ಷಣ ಹೆಚ್ಚಿನ ಜನರು ಗುಡಿಸಲಿನಿಂದ ಹೊರಬಂದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಗ್ನಿಶಾಮಕದಳದ ಕಾರ್ಯಾಚರಣೆ ಮುಂದುವರಿದಿದ್ದು, ಈ ತನಕ ಸಾವು-ನೋವಿನ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News