600 ಜನರನ್ನು ಕೆಲಸದಿಂದ ವಜಾ ಮಾಡಿದ ಉಬರ್ ಇಂಡಿಯಾ

Update: 2020-05-26 06:53 GMT

ಹೊಸದಿಲ್ಲಿ, ಮೇ 26:ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಸುಮಾರು 600 ಮಂದಿ ಪೂರ್ಣಕಾಲಿಕ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದೇವೆ ಎಂದು ಉಬೆರ್ ಇಂಡಿಯಾ ಮಂಗಳವಾರ ತಿಳಿಸಿದೆ.

ದೇಶದಲ್ಲಿರುವ ಕಂಪೆನಿಯ ಉದ್ಯೋಗಿಗಳ ಪೈಕಿ ಶೇ.25ರಷ್ಟು ವಜಾ ಮಾಡಲಾಗುತ್ತಿದೆ. ಕಂಪೆನಿಯ ಚಾಲಕರು,ಸವಾರರ ಬೆಂಬಲ ಕಾರ್ಯಾಚರಣೆ ಸಹಿತ ಇತರ ಕೆಲಸದಲ್ಲಿರುವವರನ್ನು ವಜಾಗೊಳಿಸಲಾಗುತ್ತಿದೆ.

"ಕೊರೋನ ವೈರಸ್ ಅನಿರೀಕ್ಷಿತ ಹೊಡೆತದಿಂದಾಗಿ ಉಬರ್‌ಗೆ ಉದ್ಯೋಗ ಕಡಿತ ಮಾಡುವುದನ್ನು ಬಿಟ್ಟು ಬೇರೇನೂ ದಾರಿ ಇಲ್ಲ. 600 ಖಾಯಂ ಉದ್ಯೋಗಿಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದ ಜಾಗತಿಕ ಉದ್ಯೋಗ ಕಡಿತದಲ್ಲಿ ಇದೂ ಸೇರಿದೆ''ಎಂದು ಉಬರ್ ಇಂಡಿಯಾ ಹಾಗೂ ದಕ್ಷಿಣ ಏಶ್ಯ ವಿಭಾಗದ ಅಧ್ಯಕ್ಷ ಪ್ರದೀಪ ಪರಮೇಶ್ವರ್ ತಿಳಿಸಿದ್ದಾರೆ.

ಪ್ರತಿಯೊಬ್ಬರಿಗೂ ಕನಿಷ್ಠ 10 ವಾರಗಳ ವೇತನ ಪಾವತಿಸಲಾಗುವುದು. ಮುಂದಿನ ಆರು ತಿಂಗಳ ವೈದ್ಯಕೀಯ ವಿಮೆ ಹಾಗೂ ಹೊರ ಗುತ್ತಿಗೆ ಬೆಂಬಲ ನೀಡಲಾಗುವುದು. ಅವರ ಬಳಿ ಇರುವ ಲ್ಯಾಪ್‌ಟಾಪ್‌ಗಳನ್ನು ಅವರಲ್ಲೇ ಇಟ್ಟುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News