ಸಿಬ್ಬಂದಿ ಸಾವು ಹಿನ್ನೆಲೆ: ಮುಂಬೈ ಸರಕಾರಿ ಆಸ್ಪತ್ರೆಯ ಎದುರು ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ

Update: 2020-05-26 07:26 GMT

ಮುಂಬೈ, ಮೇ 26: ಮುಂಬೈನ ಕೆಇಎಂ ಆಸ್ಪತ್ರೆಯ ಕೊರೋನ ವೈರಸ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ನಿರ್ಲಕ್ಷದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಇತರ ನೌಕರರು ಸರಕಾರಿ ಸ್ವಾಮ್ಯದ ಆಸ್ಪತ್ರೆಯ ಹೊರಗೆ ಮಂಗಳವಾರ ಜಮಾಯಿಸಿ ಪ್ರತಿಭಟನೆ ನಡೆಸಿದರು.

ನೂರಾರು ವೈದ್ಯರು, ಪಾರಾಮೆಡಿಕ್ಸ್ ಹಾಗೂ ಇತರರು ಮಾಸ್ಕ್ ಹಾಗೂ ಇತರ ರಕ್ಷಣಾ ಕವಚಗಳನ್ನು ಧರಿಸಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾದರು.

ಆಸ್ಪತ್ರೆಯ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಿಬ್ಬಂದಿಗೆ ರಜೆ ನೀಡಲು ನಿರಾಕರಿಸಲಾಗಿತ್ತು. ಸಿಬ್ಬಂದಿ ರವಿವಾರ ರಾತ್ರಿ ಮೃತಪಟ್ಟಿದ್ದಾನೆ. ಕೋವಿಡ್-19ನಿಂದಾಗಿಯೇ ಮೃತಪಟ್ಟಿದ್ದಾರೆಯೇ ಎಂದು ಪರೀಕ್ಷೆಯ ಬಳಿಕವಷ್ಟೇ ಗೊತ್ತಾಗಬೇಕಾಗಿದೆ.

ಮೃತಪಟ್ಟಿರುವ ಸಿಬ್ಬಂದಿಯ ಕುಟುಂಬಕ್ಕೆ ಉದ್ಯೋಗ ನೀಡಬೇಕು ಹಾಗೂ ಆರ್ಥಿಕ ಸಹಾಯವನ್ನು ನೀಡಬೇಕೆಂದು ಪ್ರತಿಭಟನಾನಿರತ ಉದ್ಯೋಗಿಗಳು ಆಗ್ರಹಿಸಿದ್ದಾರೆ.

ಮೃತಪಟ್ಟಿರುವ ಸಿಬ್ಬಂದಿಯ ಶವವನ್ನು ಕಳೆದ ರಾತ್ರಿಯಿಂದ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News