ವಿಶಿಷ್ಟವಾಗಿ ಈದ್ ಆಚರಿಸಿದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ

Update: 2020-05-26 10:09 GMT

ಮಂಗಳೂರು : ಕೊರೋನ ಭೀತಿಯ ನಡುವೆಯೂ ಈದುಲ್ ಫಿತರ್ ಅನ್ನು ವಿಶಿಷ್ಟವಾಗಿ ಆಚರಿಸಲು ದ.ಕ. ಜಿಲ್ಲೆಯಾದ್ಯಂತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯು ಜಿಲ್ಲೆಯ ಪ್ರಮುಖ ನಗರಗಳ ವಿವಿಧ ರಕ್ತನಿಧಿಗಳಿಗೆ ರಕ್ತದಾನಿಗಳನ್ನು ಪೊರೈಕೆ ಮಾಡುವ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ವಾಹಕರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಕೊರೋನ ಭೀತಿಯ ನಡುವೆಯೂ ಜಿಲ್ಲೆಯಾದ್ಯಂತ ಒಟ್ಟು 53 ಮಂದಿ ರಕ್ತದಾನಿಗಳನ್ನು ರಕ್ತನಿಧಿಗಳಿಗೆ ಪೊರೈಕೆ ಮಾಡುವ ಮೂಲಕ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯು ಅರ್ಥಪೂರ್ಣವಾದ ಮಾದರೀ ಈದ್ ಹಬ್ಬವನ್ನು ಆಚರಿಸುವ ಮೂಲಕ ಎಂದಿನಂತೆ ಈ ಸಂಧಿಗ್ಧ ಪರಿಸ್ಥಿತಿಯಲ್ಲಿಯೂ ತನ್ನ ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಕಾರ್ಯಗಳಿಂದಾಗಿ ಎಲ್ಲರಿಗೂ ಮಾದರಿಯಾಯಿತು.

 ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರಗಳಲ್ಲಿರುವ ವಿವಿಧ ರಕ್ತನಿಧಿಗಳಾದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ರಕ್ತ ನಿಧಿಯಲ್ಲಿ 21 ಮಂದಿ,ಕೆ ಎಂ ಸಿ ಆಸ್ಪತ್ರೆ , ಮಂಗಳೂರು ರಕ್ತ ನಿಧಿಯಲ್ಲಿ 9 ಮಂದಿ, ಕಣಚೂರು ಆಸ್ಪತ್ರೆ ನಾಟೆಕಲ್ ಮಂಗಳೂರು ರಕ್ತ ನಿಧಿಯಲ್ಲಿ 03 ಮಂದಿ, ಫಾದರ್  ಮುಲ್ಲರ್ ಆಸ್ಪತ್ರೆ ಕಂಕನಾಡಿ ರಕ್ತನಿಧಿಯಲ್ಲಿ ರಕ್ತ ನಿಧಿಯಲ್ಲಿ 01 ಮಂದಿ, ಕೆ ವಿ ಜಿ ಆಸ್ಪತ್ರೆ ಸುಳ್ಯ ರಕ್ತ ನಿಧಿಯಲ್ಲಿ 05 ಮಂದಿ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ರಕ್ತ ನಿಧಿಯಲ್ಲಿ 14 ಮಂದಿಯಂತೆ ಒಟ್ಟು 53 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡುವುದರ ಮೂಲಕ ಅರ್ಥಪೂರ್ಣವಾದ ಮಾದರಿ ಈದ್ ಆಚರಿಸಿ ಸಂಧಿಗ್ಧ ಪರಿಸ್ಥಿತಿಯಲ್ಲಿ ಜೀವದಾನಿಯಾಗುವ ಮೂಲಕ ಮಾದರಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News