ಉಡುಪಿ : ಹೈನುಗಾರರ ಹಸುಗಳಿಗೆ ವಿಮಾ ಸೌಲಭ್ಯ ಒದಗಿಸಲು ನಿರ್ಧಾರ

Update: 2020-05-26 12:55 GMT

ಉಡುಪಿ, ಮೇ 26: ದ.ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ ರಾಸುಗಳು ಮರಣ ಹೊಂದಿದ ಸಂದರ್ಭದಲ್ಲಿ, ಹೈನುಗಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಇದನ್ನು ತಪ್ಪಿಸಲು ಹಸುಗಳಿಗೂ ವಿಮಾ ಸೌಲಭ್ಯ ಒದಗಿಸಲು ಒಕ್ಕೂಟ ಚಿಂತನೆಯನ್ನು ನಡೆಸುತ್ತಿದೆ.

ಹೈನುಗಾರರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ, ಇದಕ್ಕೆ ಅವರನ್ನು ಉತ್ತೇಜಿಸಲು ಹಾಗೂ ಹಸುಗಳ ಆಕಸ್ಮಿಕ ಮರಣದಿಂದಾಗುವ ಅನಿರೀಕ್ಷಿತ ನಷ್ಟಕ್ಕೆ ಪರಿಹಾರ ನೀಡುವ ಉದ್ದೇಶ ದಿಂದ ಹೈನುಗಾರರ ಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯ ಒದಗಿಸಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಈ ಯೋಜನೆಯಂತೆ ಒಕ್ಕೂಟದಿಂದ ಶೇ.75 ಮತ್ತು ಹೈನುಗಾರರಿಂದ ಶೇ.25 ವಿಮಾ ವಂತಿಕೆಯನ್ನು ಭರಿಸಿ ಅಂದಾಜು ಸುಮಾರು ಒಂದು ಲಕ್ಷ ರಾಸುಗಳಿಗೆ ವಿಮಾ ಸೌಲಭ್ಯ ಒದಗಿಸಲು ಉದ್ಧೇಶಿಸಲಾಗಿದೆ. ಇದರ ವೌಲ್ಯ 6 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ಯೋಜನೆ ಯನ್ನು ಜೂನ್ 1ರಿಂದ ಜಾರಿ ಗೊಳಿಸಲಾಗುವುದು.ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸಂಪರ್ಕಿಸಬಹುದಾಗಿದೆ.

ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕ ಸದಸ್ಯರು ತಮ್ಮ ಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯವನ್ನು ಪಡೆದುಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಕೊಳ್ಳಬಹುದಾಗಿದೆ. ಎಲ್ಲಾ ಹೈನುಗಾರರು ಇದರ ಸೌಲಭ್ಯವನ್ನು ಪಡೆಯುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News