ಯುವಕ ನಾಪತ್ತೆ

Update: 2020-05-26 12:58 GMT

ಉಡುಪಿ, ಮೇ 26: ಬ್ರಹ್ಮಾವರ ತಾಲೂಕು ಹವರಾಲು ಕಾವಡಿ ಗ್ರಾಮದ ಸುಕುಮಾರ (22) ಎಂಬ ಯುವಕ 2019ರ ಡಿ.1ರಂದು ಬೆಳಗ್ಗೆ ಮನೆಗೆ ಬಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ಇಲ್ಲಿವರೆಗೂ ವಾಪಾಸ್ ಬಾರದೆ ಕಾಣೆಯಾಗಿರುವ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲಿದೆ.

5.8 ಅಡಿ ಎತ್ತರ, ಎಣ್ಣೆಗಪ್ಪು ಮೈ ಬಣ್ಣ ಹೊಂದಿರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ.ಸೊಂಟದ ಎಡಬದಿ ಹಳೆಯ ಸುಟ್ಟ ಗಾಯ, ಎದುರಿನ ಹಲ್ಲು ಅರ್ಧ ಮುರಿದಿದೆ. ಈ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಕೋಟ ಪೊಲೀಸ್ ಠಾಣೆ : 0820-2564155 ಮೊಬೈಲ್ ಸಂಖ್ಯೆ: 9480805454, ವೃತ್ತನಿರೀಕ್ಷಕರ ಕಚೇರಿ: 0820-2561966, 9480805432 ಸಂಪರ್ಕಿಸುವಂತೆ ಕೋಟ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News