ಸಂಕಷ್ಟದಲ್ಲಿ ವಲಸೆ ಕಾರ್ಮಿಕರು: ಕೇಂದ್ರ, ರಾಜ್ಯ ಸರಕಾರಗಳಿಂದ ಲೋಪಗಳಾಗಿವೆ ಎಂದ ಸುಪ್ರೀಂ ಕೋರ್ಟ್

Update: 2020-05-26 16:59 GMT

ಹೊಸದಿಲ್ಲಿ: ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ನೆರವಾಗಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶಿಸಿದೆ.

ಗುರುವಾರದೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದ ಜಸ್ಟಿಸ್ ಕಿಶನ್ ಕೌಲ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕ್ರಮಗಳನ್ನು ಕೈಗೊಂಡಿದ್ದರೂ , ಅಸಮರ್ಪಕತೆ ಮತ್ತು ಕೆಲವು ಲೋಪಗಳಿವೆ ಎಂದು ಹೇಳಿದೆ.

“ಎಲ್ಲೆಲ್ಲೋ ಸಿಲುಕಿರುವ ಕಾರ್ಮಿಕರಿಗೆ ಆಡಳಿತಗಳು ಊಟ, ನೀರು ನೀಡುತ್ತಿಲ್ಲ ಎನ್ನುವ ವರದಿಗಳನ್ನು ಮಾಧ್ಯಮಗಳು ಪ್ರಕಟಿಸಿವೆ” ಎಂದು ಸುಪ್ರೀಂ ಹೇಳಿದೆ.

ತನಗೆ ನೆರವಾಗುವಂತೆ ಮತ್ತು ಭಾರತ ಸರಕಾರವು ತೆಗೆದುಕೊಂಡಿರುವ ಮತ್ತು ತೆಗೆದುಕೊಳ್ಳಲಿರುವ ಎಲ್ಲ ಕ್ರಮಗಳನ್ನು ತನ್ನ ಗಮನಕ್ಕೆ ತರುವಂತೆ ಸಾಲಿಸಿಟರ್ ಜನರಲ್‌ಗೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು,ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ನೋಟಿಸ್‌ಗಳನ್ನು ಹೊರಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News