ಗುಜರಾತ್ ನಿಂದ ಬಿಹಾರಕ್ಕೆ ಹೊರಟ ವಲಸೆ ಕಾರ್ಮಿಕರಿದ್ದ ರೈಲು ತಲುಪಿದ್ದು ಕರ್ನಾಟಕವನ್ನು !

Update: 2020-05-26 13:51 GMT

ಹೊಸದಿಲ್ಲಿ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗಾಗಿ ಇರುವ ರೈಲೊಂದು ಕಾರ್ಮಿಕರನ್ನು ಹೊತ್ತು ಗುಜರಾತ್ ನಿಂದ ಬಿಹಾರಕ್ಕೆ ಹೊರಟಿತ್ತು. ಆದರೆ ಇದು ತಲುಪಿದ್ದು ಬಿಹಾರಕ್ಕಲ್ಲ, ಬದಲಾಗಿದೆ ಕರ್ನಾಟಕಕ್ಕೆ!.

ಇತ್ತೀಚೆಗಷ್ಟೇ ಸೂರತ್ ನಿಂದ ಹೊರಟಿದ್ದ 1200 ಕಾರ್ಮಿಕರಿದ್ದ ರೈಲು ಬಿಹಾರದ ಚಾಪ್ರಾ ಬದಲು ಒಡಿಶಾದ ರೂರ್ಕೆಲಾ ತಲುಪಿದ್ದರೆ, ಇಂತಹ ಇನ್ನೆರಡು ಘಟನೆಗಳಲ್ಲಿ ಪಾಟ್ನಾದ ಬದಲು 2 ರೈಲುಗಳು ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಗಯಾ ತಲುಪಿದ್ದವು.

ಲಾಕ್ ಡೌನ್ ನಿಂದ ಕಂಗಾಲಾದ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ನೂರಾರು ರೈಲುಗಳ ವ್ಯವಸ್ಥೆ ಮಾಡಿದೆ. ಆದರೆ ನಿರ್ವಹಣೆ ವ್ಯವಸ್ಥೆಯಿಂದ ನಡೆಯುತ್ತಿರುವ ಇಂತಹ ಲೋಪಗಳು ಭಾರೀ ಆಕ್ರೋಶವನ್ನು ಸೃಷ್ಟಿಸುತ್ತಿದೆ.

ಗುಜರಾತ್ ನಿಂದ ಬರುತ್ತಿದ್ದ ರೈಲು ಬಿಹಾರ ತಲುಪುವ ಬದಲು ದಾರಿ ತಪ್ಪಿ ಮಹಾರಾಷ್ಟ್ರ ತಲುಪಿದ್ದು ನಂತರ ಅಲಹಾಬಾದ್ ಬದಲು ಬೆಂಗಳೂರಿನ ಕಡೆಗೆ ಚಲಿಸಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ ಎಂದು deccanherald.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News