ಉಡುಪಿ: ಕಟ್ಟಡ ಕಾರ್ಮಿಕರ ಬೇಡಿಕೆ ಈೇರಿಸುವಂತೆ ಸಾಂಕೇತಿಕ ಪ್ರತಿಭಟನೆ

Update: 2020-05-26 15:07 GMT

ಉಡುಪಿ, ಮೇ 26: ಕೋವಿಡ್ ಪರಿಹಾರವನ್ನು ಮಳೆಗಾಲದ 3 ತಿಂಗಳಿಗೆ ಪ್ರತಿ ವಾರಕ್ಕೆ 2000ರೂ.ನಂತೆ ಮಾಸಿಕ 8000ರೂ.ಗೆ ಹೆಚ್ಚಿಸಲು ಸೇರಿದಂತೆ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಪರಿಹಾರ ಹಣ ಬಾಕಿ ಇರುವ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಶೀಘ್ರ ಹಣ ಜಮೆ ಮಾಡಬೇಕು. ಸರಕಾರವು ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ಹಣವನ್ನು ಬಿಜೆಪಿಯ ಶಾಸಕರಿಗೆ ತಮ್ಮ ಕ್ಷೇತ್ರದ ಮತದಾರ ರಿಗೆ ಆಹಾರ ಕಿಟ್ಗಳನ್ನು ಹಂಚಿ, ಅದರಲ್ಲಿಯೂ ದುರು ಪಯೋಗಪಡಿಸಿ ಕೊಳ್ಳುತ್ತಿರುವುದನ್ನು ಸರಕಾರ ಕೂಡಲೇ ನಿಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಲಸೆ ಕಾರ್ಮಿಕರ ಪರಿಸ್ಥಿತಿ ದಯನೀಯವಾಗಿದೆ. ಅವರನ್ನು ಕೆಲಸಕ್ಕೆ ಕರೆದು ಕೊಂಡ ಬಂದ ಮಧ್ಯವರ್ತಿಗಳು, ಕೆಲಸ ಮಾಡಿಸುತ್ತಿರುವ ಬಿಲ್ಡರ್ಗಳು ಅವರಿಗೆ ವಾಸಿಸಲು ಯೋಗ್ಯ ಮನೆ, ಕುಡಿಯುವ ನೀರು, ಆರೋಗ್ಯ, ಮಹಿಳೆ ಯರಿಗೆ, ಮಕ್ಕಳಿಗೆ ಯಾವುದೇ ಸುರಕ್ಷತೆ ನೀಡುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಬಳಿಕ ಅಪರ ಜಿಲ್ಲಾಧಿಕಾರಿ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಅಧ್ಯಕ್ಷ ಶೇಖರ ಬಂಗೇರ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಗಣೇಶ ನಾಯ್ಕ್ ಉಪಸ್ಥಿತರಿದ್ದರು.

ಕುಂದಾಪುರ, ಬೈಂದೂರಿನಲ್ಲಿ ಮನವಿ: ಕುಂದಾಪುರ ತಾಲೂಕು ಸಂಘದ ವತಿಯಿಂದ ಕುಂದಾಪುರ ಉಪತಹಶೀಲ್ದಾರರ ಮೂಲಕ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ರಿಗೆ ಇಂದು ಮನವಿ ಸಲ್ಲಿಸಲಾಯಿತು.

ಮನವಿಯನ್ನು ಉಪ ತಹಶೀಲ್ದಾರ ಶಂಕರ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ನಾಗರತ್ನ ಹಾಜರಿದ್ದರು.

ಬೈಂದೂರು ತಾಲೂಕು ಸಂಘದ ವತಿಯಿಂದ ಬೈಂದೂರು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ತೊಂಡೆಮಕ್ಕಿ, ಕೋಶಾಧಿಕಾರಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಮುಖಂಡರಾದ ನಾಗರತ್ನ ನಾಡ, ಮಾಧವ ಉಪ್ಪುಂದ, ಶ್ರೀಧರ ಬಿಜೂರು, ಮಂಜು ಪಡುವರಿ, ಉದಯ ಗಾಣಿಗ, ಸಿಐಟಿಯು ಮುಖಂಡ ರಾದ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News