2 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಅಪಾಯಕಾರಿ: ಜಪಾನ್ ವೈದ್ಯರಿಂದ ಎಚ್ಚರಿಕೆ

Update: 2020-05-26 15:34 GMT

ಟೋಕಿಯೊ (ಜಪಾನ್), ಮೇ 26: ಎರಡು ವರ್ಷಕ್ಕಿಂತ ಕೆಳಗಿನ ಮಕ್ಕಳು ಮುಖಕವಚವನ್ನು ಧರಿಸಬಾರದು ಎಂದು ಜಪಾನ್‌ನ ವೈದ್ಯರ ಗುಂಪೊಂದು ಹೇಳಿದೆ. ಮುಖಕವಚಗಳು ಉಸಿರಾಟವನ್ನು ತ್ರಾಸದಾಯಕಗೊಳಿಸಬಹುದು ಹಾಗೂ ಉಸಿರುಗಟ್ಟುವ ಅಪಾಯವನ್ನು ಹೆಚ್ಚಿಸಬಹುದು ಎಂದು ಎಚ್ಚರಿಸಿರುವ ಅದು, ಈ ನಿಟ್ಟಿನಲ್ಲಿ ಹೆತ್ತವರಿಗೆ ತುರ್ತು ಮನವಿಯೊಂದನ್ನು ಹೊರಡಿಸಿದೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಬೀಗಮುದ್ರೆಯನ್ನು ವಿವಿಧ ದೇಶಗಳು ಸಡಿಲಿಸುತ್ತಿರುವ ಹಿನ್ನೆಲೆಯಲ್ಲಿ, ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸುರಕ್ಷಿತ ಅಂತರವನ್ನು ಕಾಪಾಡಲು ಸಾಧ್ಯವಾಗದಿದ್ದರೆ ಮುಖಕವಚಗಳನ್ನು ಧರಿಸುವಂತೆ ಜಗತ್ತಿನಾದ್ಯಂತ ಆರೋಗ್ಯ ಪರಿಣತರು ಎಚ್ಚರಿಕೆ ನೀಡುತ್ತಿದ್ದಾರೆ.

ಆದರೆ, ಮುಖಕವಚಗಳು ಶಿಶುಗಳಿಗೆ ತೀರಾ ಅಪಾಯಕಾರಿಯಾಗಬಹುದು ಎಂದು ಜಪಾನ್ ಮಕ್ಕಳ ವೈದ್ಯರ ಅಸೋಸಿಯೇಶನ್ ಹೆತ್ತವರನ್ನು ಎಚ್ಚರಿಸಿದೆ.

ಮಾಸ್ಕ್‌ಗಳು ಶಿಶುಗಳಲ್ಲಿ ಉಸಿರಾಟವನ್ನು ತ್ರಾಸದಾಯಕಗೊಳಿಸಬಹುದು. ಯಾಕೆಂದರೆ, ಶಿಶುಗಳಲ್ಲಿ ಕಿರಿದಾದ ವಾಯು ನಾಳಗಳಿವೆ. ಇವು ಮಕ್ಕಳ ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಅಸೋಸಿಯೇಶನ್ ಹೇಳಿದೆ.

ಅದೂ ಅಲ್ಲದೆ, ಮುಖಕವಚಗಳು ಶಿಶುಗಳು ಬಿಸಿಲಿನ ಝಳಕ್ಕೆ ಒಳಗಾಗುವ ಅಪಾಯವನ್ನೂ ಹೆಚ್ಚಿಸುತ್ತದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News