ಭಾರತೀಯ ಅಮೆರಿಕನ್‌ ಸಂಶೋಧಕನಿಗೆ ಅಮೆರಿಕದ ಪ್ರತಿಷ್ಠಿತ ‘ವರ್ಷದ ಸಂಶೋಧಕ ಪ್ರಶಸ್ತಿ’

Update: 2020-05-26 15:45 GMT

ನ್ಯೂಯಾರ್ಕ್, ಮೇ 26: ಭಾರತೀಯ ಅಮೆರಿಕನ್ ಸಂಶೋಧಕ ರಾಜೀವ್ ಜೋಶಿಗೆ ಅಮೆರಿಕದ ಪ್ರತಿಷ್ಠಿತ ವರ್ಷದ ಸಂಶೋಧಕ ಪ್ರಶಸ್ತಿಯನ್ನು ನೀಡಲಾಗಿದೆ.

ಇಲೆಕ್ಟ್ರಾನಿಕ್ ಉದ್ಯಮದ ಮುನ್ನಡೆ ಮತ್ತು ಕೃತಕ ಬುದ್ಧಿಮತ್ತೆ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಅವರು ಮಾಡಿರುವ ಸಾಧನೆಗಳಿಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಅಮೆರಿಕದಲ್ಲಿನ 250ಕ್ಕೂ ಅಧಿಕ ಪೇಟೆಂಟಡ್ ಸಂಶೋಧನೆಗಳಲ್ಲಿ ಮಾಸ್ಟರ್ ಇನ್‌ವೆಂಟರ್ ಆಗಿರುವ ಡಾ. ಜೋಶಿ, ನ್ಯೂಯಾರ್ಕ್‌ನ ಐಬಿಎಮ್ ಥಾಮ್ಸನ್ ವಾಟ್ಸನ್ ರಿಸರ್ಚ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ತಿಂಗಳ ಆದಿ ಭಾಗದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯೂಯಾರ್ಕ್ ಇಂಟಲೆಕ್ಚುವಲ್ ಪ್ರಾಪರ್ಟಿ ಲಾ ಅಸೋಸಿಯೇಶನ್ ಅವರಿಗೆ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.

ಐಐಟಿ ಮುಂಬೈನ ಹಳೆವಿದ್ಯಾರ್ಥಿಯಾಗಿರುವ ಡಾ. ಜೋಶಿ, ಮ್ಯಾಸಚೂಸಿಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಎಂಎಸ್ ಪದವಿ ಪಡೆದಿದ್ದಾರೆ ಹಾಗೂ ನ್ಯೂಯಾರ್ಕ್‌ನ ಕೊಲಂಬಿಯ ವಿಶ್ವವಿದ್ಯಾನಿಲಯದಿಂದ ಮೆಕಾನಿಕಲ್/ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News