ಮೂಡಬೆಟ್ಟು, ಹೇರೂರು ಗ್ರಾಮದಲ್ಲಿ ಕಂಟೈನ್ಮೆಂಟ್ ವಲಯ ಘೋಷಣೆ

Update: 2020-05-26 16:23 GMT

ಉಡುಪಿ, ಮೇ 26: ಉಡುಪಿ ಜಿಲ್ಲೆಯಲ್ಲಿ ಮೇ 25ರಂದು ಕಂಡು ಬಂದಿ ರುವ ಎರಡು ಸ್ಥಳೀಯ ಕೊರೋನ ಪಾಸಿಟಿವ್ ಪ್ರಕರಣಗಳ ಸೋಂಕಿತ ವ್ಯಕ್ತಿಗಳು ವಾಸವಾಗಿರುವ ಪ್ರದೇಶಗಳನ್ನು ಜಿಲ್ಲಾಡಳಿತವು ಕಂಟೈನ್‌ಮೆಂಟ್ ಹಾಗೂ ಬಫರ್ ವಲಯವನ್ನಾಗಿ ಘೋಷಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

ಕೊರೋನ ಸೋಂಕಿತ ಉಡುಪಿ ಜಿಪಂ ಸಿಬ್ಬಂದಿ ವಾಸವಾಗಿರುವ ಮೂಡ ಬೆಟ್ಟು ಗ್ರಾಮದ ಸರಕಾರಿಗುಡ್ಡೆಯ ಮನೆಯಿಂದ ಪಶ್ಚಿಮಕ್ಕೆ ಎರಡನೆ ಕ್ರಾಸ್ ರಸ್ತೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡು, ಪೂರ್ವಕ್ಕೆ ನಾಲ್ಕನೆ ಕ್ರಾಸ್ ರಸ್ತೆ, ಉತ್ತರಕ್ಕೆ ಜಿಪಂ ರಸ್ತೆ ಮತ್ತು ದಕ್ಷಿಣಕ್ಕೆ ಕನ್ಯಾನ ಲೇಔಟ್ ರಸ್ತೆಯನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಮಾಡಲಾಗಿದೆ. ಇಲಿ್ಲ 60 ಮನೆ, 4743 ಜನಸಂಖ್ಯೆ ಇದೆ.

ಬಫರ್ ರೆನ್ ಆಗಿ ಪಶ್ಚಿಮಕ್ಕೆ ಕುರ್ಕಾಲು ಗ್ರಾಮ, ಪೂರ್ವಕ್ಕೆ ಮಟ್ಟು ಗ್ರಾಮ, ಉತ್ತರಕ್ಕೆ ಏಣಗುಡ್ಡೆ ಗ್ರಾಮ, ದಕ್ಷಿಣಕ್ಕೆ ಪಾಂಗಾಳ ಗ್ರಾಮದ ಗಡಿ ಯೊಳಗಿನ ಇಡೀ ಮೂಡಬೆಟ್ಟು ಗ್ರಾಮವನ್ನು ಘೋಷಿಸಲಾಗಿದೆ. ಈ ವ್ಯಾಪ್ತಿ ಯಲ್ಲಿ 2151 ಮನೆ, 4743 ಜನಸಂಖ್ಯೆ, 76 ಅಂಗಡಿಗಳು, 4 ಕಚೇರಿಗಳು ಇವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೇರೂರಿನ ಹೆಡ್‌ಕಾನ್‌ಸ್ಟೇಬಲ್ ನಿವಾಸ

ಉಡುಪಿ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಿಎಆರ್‌ನ ಹೆಡ್ ಕಾನ್‌ಸ್ಟೇಬಲ್ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ವಾಸ ವಾಗಿರುವ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಮನೆಯಿಂದ ಪಶ್ಚಿಮಕ್ಕೆ ಮರಿಕಟ್ಟೆ, ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿ 66, ಉತ್ತರಕ್ಕೆ ಹೇರೂರು ಏರಿಯಾ, ದಕ್ಷಿಣಕ್ಕೆ ಬಂಡಸಾಲೆ ಬೆಟ್ಟು ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ 76 ಮನೆಗಳು, 672 ಜನಸಂಖ್ಯೆ, 9 ಅಂಗಡಿಗಳು ಬರುತ್ತವೆ.

ಬಫರ್ ರೆನ್ ಆಗಿ ಪಶ್ಚಿಮಕ್ಕೆ ಆರೂರು ಗ್ರಾಮ, ಪೂರ್ವಕ್ಕೆ ಬೈಕಾಡಿ ಗ್ರಾಮ, ಉತ್ತರಕ್ಕೆ ಚಾಂತಾರು ಗ್ರಾಮ, ದಕ್ಷಿಣಕ್ಕೆ ಉಪ್ಪೂರು ಗ್ರಾಮದ ಗಡಿ ಯೊಳಗಿನ ಇಡೀ ಹೇರೂರು ಗ್ರಾಮವನ್ನು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 1508 ಮನೆಗಳು, 4106 ಜನ ಸಂಖ್ಯೆ, 115 ಅಂಗಡಿಗಳು, 8 ಕಚೇರಿಗಳು ಬರುತ್ತವೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News