ಕೊರೋನದಿಂದ ನರ್ಸ್ ಮೃತಪಟ್ಟ ಆಸ್ಪತ್ರೆಯಲ್ಲಿ ಇತರ ನರ್ಸ್ ಗಳಿಗೆ ಪಿಪಿಇ ಕಿಟ್ ಮರುಬಳಕೆಗೆ ಒತ್ತಾಯ: ಆರೋಪ

Update: 2020-05-26 16:31 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಕೊರೋನ ವೈರಸ್ ನಿಂದ ನರ್ಸ್ ಒಬ್ಬರು ಮೃತಪಟ್ಟ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ನರ್ಸ್ ಗಳಿಗೆ ವೈಯಕ್ತಿಕ ಸುರಕ್ಷಿತ ಸಾಧನಗಳನ್ನು ಮರುಬಳಕೆ ಮಾಡುವಂತೆ ಹೇಳಲಾಗುತ್ತಿದೆ ಎಂದು ಅಲ್ಲಿನ ನರ್ಸ್ ಗಳು ಆರೋಪಿಸಿದ್ದಾರೆ ಎಂದು thewire.in ವರದಿ ಮಾಡಿದೆ.

“ವೈದ್ಯರಿಗೆ ಹೊಸ ಪಿಪಿಇ ಕಿಟ್ ಗಳನ್ನು ನೀಡಲಾಗುತ್ತಿದೆ. ಆದರೆ ನರ್ಸ್ ಗಳಿಗೆ ಪಿಪಿಇಯ ಮರುಬಳಕೆ ಮಾಡುವಂತೆ ಹೇಳಲಾಗುತ್ತಿದೆ. ಆದರೆ ನಾವು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ ಇದು ಕೋವಿಡ್ 19 ಆಸ್ಪತ್ರೆಯಲ್ಲ. ನಾವು ಕಡಿಮೆ ಅಪಾಯದಲ್ಲಿದ್ದು, ನಾವು ಪಿಪಿಇ ಕಿಟ್ ಗಳನ್ನು ಬಳಸಬಹುದು” ಎಂದು ಹಿರಿಯ ನರ್ಸ್ ಒಬ್ಬರು ಆರೋಪಿಸಿದ್ದಾರೆ.

ಒಂದು ವಾರದ ಹಿಂದೆ ಹೊಸ ಪಿಪಿಇ ಕಿಟ್ ಗಳು ಇರದ ಬಗ್ಗೆ ಮೃತ ನರ್ಸ್ ಆರೋಪಿಸಿದ್ದರು ಎಂದು ಅವರ ಸಹೋದ್ಯೋಗಿಯೊಬ್ಬರು ಆರೋಪಿಸುತ್ತಾರೆ.

ಮೇ 18ರಂದು ಜ್ವರ, ಗಂಟಲು ನೋವು ಮತ್ತು ಮೈಕೈ ನೋವಿನ ಬಗ್ಗೆ ಮೃತ ನರ್ಸ್ ಆರೋಪಿಸಿದ್ದರು. ಮೇ 21ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 24ರಂದು ಅವರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News