ವೋಕಲ್ ಫಾರ್ ಲೋಕಲ್ ಅಭಿಯಾನ ಯಶಸ್ಸಿಗೆ ಶಾಸಕ ಕಾಮತ್ ಕರೆ

Update: 2020-05-26 17:06 GMT

ಮಂಗಳೂರು, ಮೇ 26: ಪ್ರಧಾನಿ ನರೇಂದ್ರ ಮೋದಿಯ ‘ವೋಕಲ್ ಫಾರ್ ಲೋಕಲ್ ಅಭಿಯಾನ’ವನ್ನು ಯಶಸ್ಸಿಗೊಳಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಕರೆ ನೀಡಿದ್ದಾರೆ.

ದೇಶಿಯ ಉತ್ಪಾದನೆಗಳಿಗೆ ಬೆಂಬಲ ನೀಡಿ ದೇಶದ ಆರ್ಥಿಕತೆಯನ್ನು ಉತ್ತುಂಗಕ್ಕೇರಿಸುವ ದೃಷ್ಟಿಯಲ್ಲಿ ವೋಕಲ್ ಫಾರ್ ಲೋಕಲ್ ಅಭಿಯಾನ ಮಹತ್ವ ಪಡೆದಿದೆ. ಕೊರೋನ ಹೊಡೆತಕ್ಕೆ ತತ್ತರಿಸಿರುವ ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡವಲ್ಲಿ ಈ ಅಭಿಯಾನ ಮಹತ್ವ ಪಡೆದು ಕೊಳ್ಳಲಿದೆ. ಹಾಗಾಗಿ ಜಿಲ್ಲೆಯಲ್ಲಿ ತಯಾರಾಗುವ ಕೃಷಿ ಉತ್ಪನ್ನಗಳು, ಗೃಹ ಉತ್ಪನ್ನಗಳನ್ನು ಬಳಸುವಂತೆ ಕಾಮತ್ ಮನವಿ ಮಾಡಿದ್ದಾರೆ. ತನ್ನ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಥಳೀಯ ಆಹಾರ ಉತ್ಪನ್ನಗಳು, ದಿನಬಳಕೆಯ ವಸ್ತುಗಳು, ಗೃಹ ಉತ್ಪನ್ನಗಳ ಬ್ರಾಂಡ್ ಬಗ್ಗೆ ಮಾಹಿತಿ ಯನ್ನು ಪೋಸ್ಟ್ ಮಾಡುವೆ, ತಾವೂ ಪೋಸ್ಟ್ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News