ಭಟ್ಕಳದ 5 ಮಂದಿ ಕೊರೋನ ವೈರಸ್ ನಿಂದ ಗುಣಮುಖ : ಆಸ್ಪತ್ರೆಯಿಂದ ಬಿಡುಗಡೆ

Update: 2020-05-26 17:38 GMT

ಭಟ್ಕಳ : ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದಾಗಿ ಭಟ್ಕಳದಲ್ಲಿ ಮೂವತ್ತುಕ್ಕೂ ಅಧಿಕ ಮಂದಿ ಕೊರೋನ ಸೋಂಕಿತರಾಗಿದ್ದು, ಕಾರವಾರದ  ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ಮೂರು ದಿನಗಳ ಹಿಂದೆ 21 ಮಂದಿ ಕೊರೋನ ಮುಕ್ತರಾಗಿ ಬಿಡುಗಡೆಗೊಂಡಿದ್ದರೆ ಮಂಗಳವಾರ 5 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಕಾರವಾರ ಮೆಡಿಕಲ್ ಕಾಲೇಜಿನ ಕೊವೀಡ್-19 ವಾರ್ಡಿನಿಂದ ಇದುವರೆಗೆ 26 ಮಂದಿ ಸೋಂಕಿತರು ಬಿಡುಗಡೆ ಹೊಂದಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News