ರದ್ದಾದ ರೈಲು ಟಿಕೇಟ್ ಮೊತ್ತ ಮರುಪಾವತಿ: ದಕ್ಷಿಣ ರೈಲ್ವೇ ಪ್ರಕಟಣೆ

Update: 2020-05-26 17:43 GMT

ಮಂಗಳೂರು, ಮೇ.26: ಕೋವಿಡ್ -19ಕಾರಣದಿಂದ ಮಾರ್ಚ್ 23 ,2020ರಿಂದ ರದ್ದಾದ ಎಲ್ಲಾ ರೈಲುಗಳ ಟಿಕೇಟ್ ಪಡೆದಿರುವ ಪ್ರಯಾಣಿಕರ ಟಿಕೆಟ್ ನ ಮೊತ್ತವನ್ನು ಮರುಪಾವತಿ ಮಾಡಲಾಗು ವುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಮರುಪಾವತಿಯ ಟಿಕೇಟ್ ದರ  ವಿವರ www.irctc.co.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ತಮಿಳುನಾಡು ಮತ್ತು ಪಾಂಡಿಚೇರಿಯ ರೈಲು ನಿಲ್ದಾಣ ಹೊರತು ಪಡಿಸಿ ಕೇರಳ ಮತ್ತು ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಮೇ 27ರಿಂದ ಮರುಪಾವತಿ ಪ್ರಕ್ರೀಯೆ ಆರಂಭವಾಗಲಿದೆ.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಲ್ಲಿ ಮಾರ್ಚ್, 23ರಿಂದ 31ರವರೆಗಿನ ಮುಂಗಡ ಟಿಕೇಟ್ ಪಡೆದಿರುವವರಿಗೆ ಮೇ.27ರ ಬಳಿಕ ಟಿಕೇಟ್ ಗಳ ಮೊತ್ತ ಮರುಪಾವತಿ ಮಾಡಲಾಗುವುದು. ಎಪ್ರಿಲ್.1ರಿಂದ 14ರವರೆಗಿನ ಟಿಕೇಟ್ ದರ ಜೂನ್ 3ರಂದು, ಎ.15-30ವರೆಗೆ ಜೂನ್ 9ರಂದು,ಮೇ1-15ರವರೆಗಿನ ಟಿಕೇಟ್ ಗಳ ಬಗ್ಗೆ ಜೂನ್ 16ರಂದು, ಮೇ.16-31ರವರೆಗಿನ ಟಿಕೇಟ್ ಗಳ ಬಗ್ಗೆ ಜೂನ್ 23ರಬಳಿಕ ಹಾಗೂ ಜೂನ್ 1ರಿಂದ 30ರವರೆಗಿನ ಟಿಕೇಟ್ ಗಳಿಗೆ ಜೂನ್ 28ರ ಬಳಿಕ ಮುಂಗಡ ಖಾದಿರಿಸಿರುವ ಪ್ರಯಾ ಣಿಕರಿಗೆ ಕೊವಿಡ್ -19 ಸುರಕ್ಷತಾ ನಿಯಮ ಪಾಲನೆಯೊಂದಿಗೆ ಟಿಕೇಟ್ ಹಣವನ್ನು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ ದಲ್ಲಿ ಪಾವತಿಸಲಾಗುವುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News