ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿ : ಯುನಿವೆಫ್ ಕರ್ನಾಟಕ ಆಗ್ರಹ

Update: 2020-05-26 17:52 GMT

ಮಂಗಳೂರು, ಮೇ 26: ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಜೂನ್‌ 1ರಿಂದ ಪೂಜೆ ಪುನಸ್ಕಾರಕ್ಕೆ ಅವಕಾಶ ಕಲ್ಪಿಸಿರುವ ರಾಜ್ಯ ಸರಕಾರ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಲಿಸದಿರಲು ನಿರ್ಧರಿಸಿರುವುದು ವಿಪರ್ಯಾಸ. ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ಮಸೀದಿಗಳಲ್ಲೂ ನಮಾಝ್ ಸಹಿತ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಒತ್ತಾಯಿಸಿದ್ದಾರೆ.

ಕೋವಿಡ್ 19 ಹಿನ್ನಲೆಯಲ್ಲಿ ಆರಾಧನಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದಿರಬಹುದು ಎಂಬ ಶಂಕೆಯಿಂದ  ಕೋವಿಡ್ 19 ಹಿನ್ನೆಲೆಯಲ್ಲಿ ಅದರ ಪಸರಣವನ್ನು ಸರಕಾರ ಧಾರ್ಮಿಕ ಕೇಂದ್ರಗಳಲ್ಲೂ‌ ಪ್ರಾರ್ಥನೆಗಳಿಗೆ‌ ನಿರ್ಬಂಧ ಹೇರಿತ್ತು. ಲಾಕ್‌ಡೌನ್ ವೇಳೆ  ನಿರ್ಬಂಧಿಸಲಾಗಿದ್ದ ಅನೇಕ ಸಾರ್ವಜನಿಕ ಸ್ಥಳಗಳನ್ನು ಹಾಗೂ ಮಾರುಕಟ್ಟೆಗಳನ್ನು  ಇದೀಗ  ತೆರೆಯಲ್ಪಟ್ಟಿವೆ. ಆದರೆ ಆರಾಧನಾಯ ಗಳನ್ನು ತೆರೆಯದೆ ಇರುವುದು ಆಶ್ಚರ್ಯಕರವಾಗಿದೆ. ನಿತ್ಯ 5 ಸಮಯಗಳಲ್ಲಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್  ನಿರ್ವಹಿಸಲಾ ಗುತ್ತದೆ. ಆವಾಗ ಎಲ್ಲರೂ ಸಾಲಾಗಿ ನಿಲ್ಲುತ್ತಾರೆ.  ಸಾಮಾನ್ಯವಾಗಿ ಸುಮಾರು ನೂರಕ್ಕೂ ಹೆಚ್ಚು ಸಾಲುಗಳನ್ನು ಮಾಡುವ ವ್ಯವಸ್ಥೆ ಇರುವ ಮಸೀದಿಗಳಲ್ಲಿ  ಸಾಮಾಜಿಕ ಅಂತರವನ್ನು ಕಲ್ಪಿಸಿ ಕನಿಷ್ಟ ಸಾಲುಗಳಲ್ಲಿ ಪ್ರಾರ್ಥಿಸಲು ಅವಕಾಶ ಇರುತ್ತದೆ.

ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಮಸೀದಿಗಳಿಗೆ ಭೇಟಿ ನೀಡಿ ಅಲ್ಲಿ ನಿರ್ವಹಿಸಲಾಗುವ ಪ್ರಾರ್ಥನೆಗಳ ಕುರಿತು ಅಧ್ಯಯನ ನಡೆಸುವುದು ಉತ್ತಮ. ಕೇವಲ ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲ  ಇತರ ಸಂದರ್ಭಗಳಿಗೂ ಇದು ಉಪಯುಕ್ತವಾಗಲಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಮಾಝ್ ನಿರ್ವಹಿಸುವ ವ್ಯವಸ್ಥೆಯು ಮಸೀದಿಗಳಲ್ಲಿ ಇರುವುದರಿಂದ  ಮಸೀದಿಗಳನ್ನು ಪ್ರಾರ್ಥನೆಗಾಗಿ ಮುಕ್ತಗೊಳಿಸಬೇಕು ಹಾಗು ನಮಾಝ್ ನಿರ್ವಹಿಸುವ ಅವಕಾಶ ತುರ್ತಾಗಿ ನೀಡಬೇಕೆಂದು ಯುನಿವೆಫ್ ಕರ್ನಾಟಕ  ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News