ಮೇ 29: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೆಬಿನಾರ್

Update: 2020-05-27 06:14 GMT

ಮಂಗಳೂರು, ಮೇ 27: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಹಾಗೂ ವಿಪ್ರೊ ಸಹಯೋಗದಲ್ಲಿ 3ನೇ ವರ್ಷದ ಬಿಇ ವಿದ್ಯಾರ್ಥಿಗಳಿಗಾಗಿ ಮೇ 29ರಂದು ವೆಬಿನಾರ್ ಆಯೋಜಿಸಲಾಗಿದೆ.

ಕೋವಿಡ್-19ರ ನಡುವೆ ಜೀವನ ನಡೆಸಬೇಕಾದ ಇಂದಿನ ಅನಿವಾರ್ಯ ಸನ್ನಿವೇಶದಲ್ಲಿ, ಕಂಪನಿಗಳು ಈ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದರ ಬಗ್ಗೆ ಹೆಚ್ಚಿನ ಒಳನೋಟಗಳನ್ನು ನೀಡಲು ವಿಪ್ರೋ ಲಿಮಿಟೆಡ್‌ನ ಪ್ರಾಕ್ಟೀಸ್ ಹೆಡ್ ಮೋಹನ್ ಕುಮಾರ್ 29ರಂದು 12ರಿಂದ 1:30ರ ವರೆಗೆ ವೆಬಿನಾರ್ ನೀಡಲಿದ್ದಾರೆ.

 ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ), ವಿಪ್ರೋ ಲಿಮಿಟೆಡ್‌ನ ಪ್ರಾಕ್ಟೀಸ್ ಹೆಡ್ ಶ್ರೀ ಮೋಹನ್ ಕುಮಾರ್ ಅವರಿಂದ ಒಂದು ವೆಬಿನಾರ್ ಅನ್ನು 29 ಮೇ 2020ರಂದು ಮಧ್ಯಾಹ್ನ 12:00 ರಿಂದ 1:30ರ ವರೆಗೆ ಆಯೋಜಿಸಲಿದೆ.

3ನೇ ವರ್ಷದ ಬಿಇ ಮತ್ತು 2ನೇ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿರುವ ಈ ವೆಬಿನಾರ್‌ನಲ್ಲಿ ಭಾಗವಹಿಸಲು bit.ly/SJEC-Webinar-PNN ಮೂಲಕ ವಿದ್ಯಾರ್ಥಿಗಳು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News