ಉಡುಪಿ: ಮತ್ತೆ 9 ಮಂದಿಯಲ್ಲಿ ಕೊರೋನ ಸೋಂಕು

Update: 2020-05-27 07:51 GMT

ಉಡುಪಿ, ಮೇ 27: ಜಿಲ್ಲೆಯಲ್ಲಿ ಇನ್ನೂ 9 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಬುಧವಾರ ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದ ಅಪರಾಹ್ನ 12ರವರೆಗಿನ ಕೋವಿಡ್-19 ಸೋಂಕೀತರ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ಉಡುಪಿಯಲ್ಲಿ ಇಂದು ಪಾಸಿಟಿವ್ ಬಂದವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಬಂದವರಾಗಿದ್ದಾರೆ. ಇವರಲ್ಲಿ 6 ಮಂದಿ ಪುರುಷರು, ಇಬ್ಬರು ಯುವತಿಯರು ಹಾಗೂ ಓರ್ವ ಬಾಲಕ ಸೇರಿದ್ದಾರೆ.

41ರ ಹರೆಯದ ಪುರುಷ (ಪಿ.2389), 31ರ ಹರೆಯದ ಯುವತಿ (2890), 27ರ ಯುವಕ (2891), 30ರ ಯುವಕ (2892), 32ರ ಯುವಕ (2893), 17ರ ಯುವತಿ (2894), 34ರ ಯುವಕ (2895), 25ರ ಯುವಕ (2896) ಹಾಗೂ 9 ವರ್ಷದ ಬಾಲಕ (2401) ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News