ಕೋಟ್ಯಂತರ ಭಾರತೀಯರ ‘ಟ್ರೂ ಕಾಲರ್’ ಡಾಟಾ ಡಾರ್ಕ್ ವೆಬ್‍ನಲ್ಲಿ ಮಾರಾಟಕ್ಕೆ: ವರದಿ

Update: 2020-05-27 12:03 GMT

ಹೊಸದಿಲ್ಲಿ : ಸುಮಾರು 4.75 ಕೋಟಿ ಭಾರತೀಯರ ಟ್ರೂ ಕಾಲರ್ ಡಾಟಾವನ್ನು ಸುಮಾರು 75,000 ರೂ.ಗೆ ಡಾರ್ಕ್ ವೆಬ್‍ನಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಆನ್‍ಲೈನ್ ಗುಪ್ತಚರ ಸಂಸ್ಥೆ ಸೈಬಲ್ ವರದಿ ಮಾಡಿದೆ.

ಆದರೆ ಟ್ರೂಕಾಲರ್ ಮಾತ್ರ ಈ ವರದಿ ನಿರಾಕರಿಸಿದೆಯಲ್ಲದೆ ತನ್ನ ಡಾಟಾ ಬೇಸ್ ಹ್ಯಾಕ್ ಮಾಡಲಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಹೀಗೆ ಮಾರಾಟ ಮಾಡಲಾದ ಡಾಟಾ 2019ರದ್ದಾಗಿದ್ದು, ಡಾರ್ಕ್ ವೆಬ್‍ನಲ್ಲಿ ರಾಜ್ಯಗಳು, ನಗರಗಳ ಆಧಾರದಲ್ಲಿ ವಿಂಗಡಿಸಲಾಗಿದೆ ಎಂದು ಸೈಬಲ್ ತನ್ನ ಬ್ಲಾಗ್ ಪೋಸ್ಟ್ ಒಂದರಲ್ಲಿ ಹೇಳಿದೆ.

ದೂರವಾಣಿ ಸಂಖ್ಯೆ,  ಹೆಸರು, ಲಿಂಗ, ಇಮೇಲ್ ವಿಳಾಸ, ಫೇಸ್‍ಬುಕ್ ಐಡಿ  ಸಹಿತ ಮಾಹಿತಿ ಡಾರ್ಕ್ ವೆಬ್‍ನಲ್ಲಿದೆಯೆನ್ನಲಾಗಿದೆ ಸೋರಿಕೆಯಾದ ಮಾಹಿತಿಗಳನ್ನೂ ಸೈಬಲ್ ತನ್ನ ಬ್ಲಾಗ್ ಪೋಸ್ಟ್‍ನಲ್ಲಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News