ಮುಕ್ತಭಂಡಾರ ಅಧ್ಯಯನ ಕೈಪಿಡಿ ಬಿಡುಗಡೆ

Update: 2020-05-27 14:32 GMT

ಉಡುಪಿ, ಮೇ 27: ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯದ ಕರಾಮು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೆಎಸ್‌ಓ.ಯು-ಕನೆಕ್ಟ್ ಮೂಲಕ ನಡೆಯುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯ ತರಬೇತಿ ಶಿಬಿರಾರ್ಥಿಗಳಿಗೆ ಮುಕ್ತಭಂಡಾರ ಅಧ್ಯಯನ ಕೈಪಿಡಿಯನ್ನು ಮೇ 28ರಂದು ಬೆಳಿಗ್ಗೆ 11:30ಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ‌ನಾರಾಯಣ್ ಇವರು ತಮ್ಮ ಕಚೇರಿಯಲ್ಲಿ ಆನ್‌ಲೈ್ ಮೂಲಕ ಬಿಡುಗಡೆಗೊಳಿಸುವರು.

ಈ ಸಂದರ್ಭದಲ್ಲಿ ವಿವಿಯ ಸಭಾಂಗಣದಲ್ಲಿ ಕುಲಪತಿ ಪ್ರೊ.ಎಸ್. ವಿದ್ಯಾ ಶಂಕರ್ ಅಧ್ಯಕ್ಷತೆ ವಹಿಸುವರು. ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಉಪಸ್ಥಿತರಿರುವರು.

ಕಳೆದ ಮಾರ್ಚ್ ತಿಂಗಳಲ್ಲಿ ಈ ತರಬೇತಿ ಪ್ರಾರಂಭಗೊಂಡು ಕೋವಿಡ್-19 ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ವಿವಿ ಕುಲಪತಿಗಳ ವಿಶೇಷ ಆಸಕ್ತಿಯಿಂದ ಆನ್‌ಲೈನ್ ತರಗತಿಗಳು ಪ್ರಾರಂಭಗೊಂಡಿದ್ದು, ಒಟ್ಟು 50 ದಿನ ತರಬೇತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News