‘ತಾರತಮ್ಯ’ದ ಜಾಹೀರಾತು: ಆಕ್ರೋಶದ ನಂತರ ಕ್ಷಮೆ ಯಾಚಿಸಿದ ‘ಕೆಂಟ್’

Update: 2020-05-27 16:33 GMT

ಹೊಸದಿಲ್ಲಿ: ‘ವರ್ಗೀಯ ವ್ಯವಸ್ಥೆಯ ಜಾಹೀರಾತಿ'ಗಾಗಿ ಆರೋಗ್ಯ ಉತ್ಪನ್ನಗಳ ಕಂಪೆನಿ ‘ಕೆಂಟ್’ ಕೊನೆಗೂ ಕ್ಷಮೆ ಯಾಚಿಸಿದೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ನಂತರ ಕಂಪೆನಿ ಕ್ಷಮೆ ಕೇಳಿದೆ.

“ನಿಮ್ಮ ಮನೆಕೆಲಸದಾಕೆ ಕೈಗಳಲ್ಲೇ ಗೋಧಿ ಹಿಟ್ಟನ್ನು ಕೈಯಿಂದ ಬೆರೆಸುತ್ತಿದ್ದಾರೆಯೇ? ಆಕೆಯ ಕೈಗಳಲ್ಲಿ ಸೋಂಕು ಇರಬಹುದು” ಎಂದು ಕೆಂಟ್ ನ ಬ್ರೆಡ್ ಮೇಕರ್ ಜಾಹೀರಾತಿನಲ್ಲಿ ಬರೆಯಲಾಗಿತ್ತು.

ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ನಂತರ ಕ್ಷಮೆ ಕೇಳಿರುವ ಕೆಂಟ್, “ನಮ್ಮ ಕ್ಷಮಾಪಣೆಯನ್ನು ದಯವಿಟ್ಟು ಸ್ವೀಕರಿಸಿ. ಇದು ಉದ್ದೇಶಪೂರ್ವಕವಲ್ಲ ಮತ್ತು ತಪ್ಪಾಗಿ ಸಂವಹನಗೊಂಡಿದೆ. ಅದನ್ನು ಹಿಂಪಡೆಯಲಾಗಿದೆ” ಎಂದಿದೆ.

ಸಮಾಜದ ಎಲ್ಲಾ ಸಮುದಾಯಗಳನ್ನು ಗೌರವಿಸುತ್ತೇವೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News