ರಶ್ಯದಲ್ಲಿ ಕೊರೋನ ಸಾಂಕ್ರಾಮಿಕದ ಉತ್ತುಂಗಾವಧಿ ಮುಗಿದಿದೆ: ಪುಟಿನ್

Update: 2020-05-27 16:35 GMT

ಮಾಸ್ಕೋ (ರಶ್ಯ), ಮೇ 27: ರಶ್ಯದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಉತ್ತುಂಗಾವಧಿ ಕಳೆದಿದೆ ಎಂದು ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಘೋಷಿಸಿದ್ದಾರೆ ಹಾಗೂ ಮುಂದೂಡಲ್ಪಟ್ಟಿರುವ ಎರಡನೇ ಮಹಾಯುದ್ಧದ ವಿಜಯ ಮೆರವಣಿಗೆಯನ್ನು ಮುಂದಿನ ತಿಂಗಳು ನಡೆಸುವಂತೆ ಆದೇಶಿಸಿದ್ದಾರೆ.

ಮೇ 9ರಂದು ನಡೆಯಬೇಕಾಗಿದ್ದ ವಿಜಯ ದಿವಸ ಮೆರವಣಿಗೆಯನ್ನು ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಅದು ಪುಟಿನ್‌ಗೆ ದೊಡ್ಡ ಹಿನ್ನಡೆಯಾಗಿತ್ತು. ನಾಝಿ ಜರ್ಮನಿಯನ್ನು ಸೋಲಿಸಿದ 75ನೇ ವರ್ಷವನ್ನು ಭರ್ಜರಿಯಾಗಿ ಆಚರಿಸಲು ಹಾಗೂ ಕೆಂಪು ಚೌಕದಲ್ಲಿ ನಡೆಯುವ ಸೇನಾ ಪಥಸಂಚಲನವನ್ನು ವೀಕ್ಷಿಸಲು ವಿಶ್ವದ ನಾಯಕರನ್ನು ಆಮಂತ್ರಿಸಲು ಅವರು ಉದ್ದೇಶಿಸಿದ್ದರು.

ಈಗ ರಶ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ವಿಜಯ ದಿನದ ಮೆರವಣಿಗೆಯನ್ನು ಜೂನ್ 24ಕ್ಕೆ ನಿಗದಿಪಡಿಸುವಂತೆ ರಕ್ಷಣಾ ಸಚಿವ ಸರ್ಗೀ ಶೊಯಿಗುಗೆ ಪುಟಿನ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News