ಕಂಟೈನ್ಮೆಂಟ್ ಝೋನ್‌ಗಳಲ್ಲಿ ಅಗತ್ಯ ಔಷಧಿಗಳನ್ನು ಮನೆಬಾಗಿಲಿಗೆ ಪೂರೈಸಬಹುದು: ಕೇಂದ್ರ

Update: 2020-05-27 16:56 GMT

ಹೊಸದಿಲ್ಲಿ,ಮೇ 27: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ತಾಯಂದಿರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಯನ್ನು ಖಚಿತ ಪಡಿಸಲು ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕ್ಯಾಲ್ಸಿಯಂ,ಕಬ್ಬಿಣ/ಫಾಲಿಕ್ ಆ್ಯಸಿಡ್ ಮತ್ತು ಝಿಂಕ್ ಮಾತ್ರೆಗಳಂತಹ ಅಗತ್ಯ ಔಷಧಿಗಳನ್ನು,ಜೊತೆಗೆ ಗರ್ಭ ನಿರೋಧಕಗಳನ್ನೂ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವಂತೆ ಕೇಂದ್ರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬುಧವಾರ ಸೂಚಿಸಿದೆ.

 ಯಾವುದೇ ಸಂದರ್ಭದಲ್ಲಿಯೂ ಅಗತ್ಯ ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿರುವ ಆರೋಗ್ಯ ಸಚಿವಾಲಯವು,ಸಾಮೂಹಿಕ ವಿಟಾಮಿನ್ ಎ ಪ್ರೊಫೈಲಾಕ್ಸಿಸ್,ತೀವ್ರ ಅತಿಸಾರ ನಿಯಂತ್ರಣ ಪಕ್ಷ,ರಾಷ್ಟ್ರೀಯ ಜಂತು ನಿರೋಧಕ ದಿನ ಮತ್ತು ಅನಿಮಿಯಾಕ್ಕಾಗಿ ಟೆಸ್ಟ್ ಟ್ರೀಟ್ ಹಾಗೂ ಟಾಕ್(ಟಿ3) ಶಿಬಿರಗಳನ್ನು ಆಯೋಜಿಸುವಂತೆಯೂ ಹೇಳಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದರೆ ಹೆಚ್ಚುವರಿ ಶಿಬಿರಗಳು/ಕ್ಲಿನಿಕ್‌ಗಳನ್ನು ಏರ್ಪಡಿಸುವಂತೆಯೂ ಅದು ಸೂಚಿಸಿದೆ.

ಸಮುದಾಯ ಆಧಾರಿತ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದು ಸಮಯದಲ್ಲಿ ಸೀಮಿತ ಜನರಿಗೆ (5-10) ಅವಕಾಶ ಕಲ್ಪಿಸಬೇಕು. ಇಂತಹ ಕಾರ್ಯಕ್ರಮಗಳು ಮತ್ತು ಶಿಬಿರಗಳ ಮೊದಲು ಮತ್ತು ಬಳಿಕ ಸ್ಥಳ ಮತ್ತು ಎಲ್ಲ ಉಪಕರಣಗಳನ್ನು ಸೂಕ್ತವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಹೇಳಿರುವ ಸಚಿವಾಲಯವು ಎಲ್ಲ ಕೋವಿಡ್-19 ಶಂಕಿತರಿಗೆ ಮತ್ತು ಪಾಸಿಟಿವ್ ಪ್ರಕರಣಗಳಲ್ಲಿ ವಿಶೇಷ ಕೋವಿಡ್ ಆಸ್ಪತ್ರೆಗಳಲ್ಲಿ ಆದ್ಯತೆಯಲ್ಲಿ ಸೇವೆಯನ್ನು ಒದಗಿಸಬೇಕು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News