​ಉಡುಪಿ ಗಡಿಯಲ್ಲಿನ ಚೆಕ್‌ಪೋಸ್ಟ್ ತೆರವುಗೊಳಿಸಿಲ್ಲ: ಡಿಸಿ, ಎಸ್ಪಿ ಸ್ಪಷ್ಟನೆ

Update: 2020-05-27 17:20 GMT

ಉಡುಪಿ, ಮೇ 27: ಉಡುಪಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಯಾವುದೇ ಅಂತರ್ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ಪೊಲೀಸ್ ಇಲಾಖೆ ತೆರವು ಗೊಳಿಸಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.

ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ಗಡಿಯಲ್ಲಿನ ಚೆಕ್‌ಪೋಸ್ಟ್ ತೆರವು ಮಾಡ ಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯೊಳಗೆ ಇರುವ ಅಗತ್ಯ ಇಲ್ಲದ ಕೆಲವು ಚೆಕ್‌ಪೋಸ್ಟ್‌ಗಳನ್ನು ಮುಕ್ತ ವಾಹನ ಸಂಚಾರಕ್ಕಾಗಿ ವಾರಗಳ ಹಿಂದೆ ತೆರವು ಮಾಡಲಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂತರ್ ರಾಜ್ಯವನ್ನು ಸಂಪರ್ಕಿಸುವ ಶಿರೂರು, ಹೆಜಮಾಡಿ, ಸೋಮೇಶ್ವರ, ಕೊಲ್ಲೂರಿನ ದಳಿ, ಹೊಸಂಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳು ಈಗಲೂ ಕಾರ್ಯಾಚರಿಸುತ್ತಿವೆ. ಅದೇ ರೀತಿ ರಾತ್ರಿ ತಪಾಸಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯೊಳಗೆ ಕೆಲವು ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾ ಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಒಳಗೆ ಇರುವ ಕೆಲವೊಂದು ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸ ಲಾಗಿದೆಯೇ ಹೊರತು ಗಡಿಯಲ್ಲಿರುವ ಯಾವುದೇ ಚೆಕ್‌ಪೋಸ್ಟ್‌ ಗಳನ್ನು ತೆರವುಗೊಳಿಸಿಲ್ಲ. ಹೊರರಾಜ್ಯದವರು ಜಿಲ್ಲೆಗೆ ಆಗಮಿಸುವುದರಿಂದ ಗಡಿ ಯಲ್ಲಿನ ಚೆಕ್‌ಪೋಸ್ಟ್‌ಗಳು ಕಾರ್ಯಾಚರಿಸಲಿವೆ. ಇಲ್ಲಿ ಅಂತರ್ ಜಿಲ್ಲಾ ಓಡಾಟಕ್ಕೆ ಯಾವುದೇ ಪಾಸ್‌ಗಳ ಅಗತ್ಯ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News