ಬಾವಿಗೆ ಬಿದ್ದು ಅಣ್ಣ ಮೃತ್ಯು: ರಕ್ಷಿಸಲು ಹೋದ ತಮ್ಮ ಅಸ್ವಸ್ಥ

Update: 2020-05-27 17:22 GMT

ಗಂಗೊಳ್ಳಿ, ಮೇ 27: ಸ್ವಚ್ಛಗೊಳಿಸಲು ಮನೆಯ ಬಾವಿಗೆ ಇಳಿದಿದ್ದ ವ್ಯಕ್ತಿ ಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಸೇನಾಪುರ ಗ್ರಾುದ ಗುಡ್ಡಮ್ಮಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಗುಡ್ಡಮ್ಮಾಡಿ ನಿವಾಸಿ ವಾಲ್ಟರ್ ಡಿಆಲ್ಮೇಡಾ(55) ಎಂದು ಗುರುತಿಸಲಾಗಿದೆ. ಈ ಸಂದರ್ಭ ಇವರನ್ನು ರಕ್ಷಿಸಲು ಬಾವಿಗೆ ಇಳಿದ ಮೃತರ ಸಹೋದರ ಅಲ್ಬನ್ ಅಲ್ಮೆಡಾ(50) ತೀವ್ರವಾಗಿ ಅಸ್ವಸ್ಥಗೊಂಡು ಕುಂದಾಪುರ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಲ್ಟರ್ ಡಿಆಲ್ಮೇಡಾ ಮನೆ ಸಮೀಪ ಇರುವ ಸುಮಾರು 20 ಅಡಿ ಆಳದ 5 ಅಡಿ ಅಗಲವಿರುವ ಬಾವಿಯಲ್ಲಿ ತುಂಬಿರುವ ಕೆಸರು ತೆಗೆಯಲು ಬಾವಿಗೆ ಇಳಿದಿದ್ದರು. ಈ ವೇಳೆ ಆಯತಪ್ಪಿಇಕ್ಕಟ್ಟಾದ ಬಾವಿಯೊಳಗೆ ಬಿದ್ದ ವಾಲ್ಟರ್ ಅಲ್ಮೆಡಾ, ಆಮ್ಲಜನಕದ ಕೊರತೆಯಿಂದ ಅಸ್ವಸ್ಥರಾದ ರೆನ್ನಲಾಗಿದೆ.

ಕೂಡಲೇ ಅಲ್ಲೇ ಇದ್ದ ಇವರ ಸಹೋದರ ಬಾವಿಗೆ ಬಿದ್ದ ಅಣ್ಣನನ್ನು ರಕ್ಷಿಸಲು ಬಾವಿಗೆ ಇಳಿದರು. ಈ ಸಂದರ್ಭದಲ್ಲಿ ಅಲ್ಬನ್ ಕೂಡ ಅಸ್ವಸ್ಥ ಗೊಂಡರು. ಸ್ಥಳೀಯರು ನೀಡಿದ ಮಾಹಿತಿಯಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಇಬ್ಬರನ್ನು ಮೇಲಕ್ಕೆತ್ತಿದ್ದರು.

ಆದರೆ ಇವರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವಾಲ್ಟರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮೊದಲು ಹೋಟೆಲ್ ಕೆಲಸ ಮಾಡಿ ಕೊಂಡಿದ್ದ ಇವರು, ಲಾಕ್ಡೌನ್ ಬಳಿಕ ಊರಿಗೆ ಆಗಮಿಸಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮೃತ ವಾಲ್ಟರ್ ಪತ್ನಿ, ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News