ಗುರುಪುರ ಗ್ರಾಪಂ ವತಿಯಿಂದ ಸ್ವೈಪ್ ಮೆಶಿನ್ ಬಳಕೆ ಆರಂಭ

Update: 2020-05-27 17:44 GMT

ಗುರುಪುರ, ಮೇ 27 ಗುರುಪುರ ಗ್ರಾಪಂನಲ್ಲಿ ಮನೆ ತೆರಿಗೆ ಹಾಗೂ ಇತರ ಪಾವತಿಗಳಿಗೆ ಸರಕಾರ ಸೂಚಿತ ಸ್ವೈಪ್ ಮೆಶಿನ್ ಬಳಕೆ ಆರಂಭಿಸಲಾಗಿದೆ. ಇದರಿಂದ ಸಮಯದ ಸದುಪಯೋಗವಾಗಲಿದೆ ಎಂದು ಪಿಡಿಒ ಅಬೂಬಕರ್ ತಿಳಿಸಿದ್ದಾರೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಪಂಚಾಯತ್‌ಗೆ ಭೇಟಿ ನೀಡುವ ಎಲ್ಲ ಗ್ರಾಮವಾಸಿಗಳಿಗೆ ಸ್ಯಾನಿಟೈಸರ್, ಸುರಕ್ಷಿತ ಅಂತರ ಕಾಪಾಡುವುದು, ಮಾಸ್ಕ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ ಎಂದರು.

19 ಮಂದಿ ಕ್ವಾರೆಂಟೈನ್ : ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮದ 19 ಮಂದಿಗೆ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಆರು ಮಂದಿಯನ್ನು ಬಂಗ್ಲೆಗುಡ್ಡೆಯ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿಗೃಹದಲ್ಲಿ ಕ್ವಾರೆಂಟೈನಲ್ಲಿಡಲಾಗಿದ್ದರೆ, ಉತ್ತರ ಪ್ರದೇಶದಿಂದ ಆಗಮಿಸಿದ ಐದು ಮಂದಿಯ ಕುಟುಂಬ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಒಬ್ಬನ ಸಹಿತ ಆತನ ತಂದೆಗೆ ಹೋಂ ಕ್ವಾರೆಂಟೈನ್ ನಿಯಮ ಅಳವಡಿಸಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.

‘ಕ್ವಾರೆಂಟೈನಲ್ಲಿಡಲಾದ ಮಂದಿಗೆ ಸರಕಾರದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಹೋಂ ಕಾರೆಂಟೈನಲ್ಲಿರುವವರು ಮನೆಯಿಂದ ಹೊರಗೆ ಬರುವಂತಿಲ್ಲ. ಎಲ್ಲೆಂದರಲ್ಲಿ ತಿರುಗಾಡಿದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News