ಕೊರೋನ-ಲಾಕ್‌ಡೌನ್ : ಬ್ಯಾರಿ ಅಕಾಡಮಿಯಿಂದ ಸ್ವರಚಿತ ಕವನ ಆಹ್ವಾನ

Update: 2020-05-27 17:45 GMT

ಮಂಗಳೂರು, ಮೇ 27: ‘ಕೊರೋನ -ಲಾಕ್‌ಡೌನ್ ಸಂದರ್ಭದಲ್ಲಿ ನಡೆದುಹೋದ ಆಗುಹೋಗುಗಳು’ ಎಂಬ ವಿಷಯದಲ್ಲಿ 20 ಸಾಲುಗಳಿಗೆ ಮೀರದ ಸ್ವರಚಿತ ಕವನವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಆಹ್ವಾನಿಸಿದೆ.

ಕವನವು ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. ಬ್ಯಾರಿ ಅಥವಾ ಉಪಭಾಷೆಯಾದ ಮಲಾಮೆಯಲ್ಲಿ ಬರೆದ ಕವನವನ್ನು ಜೂನ್ 10ರೊಳಗೆ ಅಕಾಡಮಿಯ ವಾಟ್ಸ್‌ಆ್ಯಪ್ ಸಂಖ್ಯೆ: 7483946578ಕ್ಕೆ ಅಥವಾ ಅಕಾಡಮಿಯ ಕಚೇರಿಗೆ (ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, 2ನೇ ಮಹಡಿ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು 575001)ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ಅಕಾಡಮಿಯ ಸದಸ್ಯ ಜಲೀಲ್ ಮುಕ್ರಿ (ಮೊ: 9945479369) ಅವರನ್ನು ಸಂಪರ್ಕಿಸಬಹುದು. ಕವನ ರಚಿಸಿದ ಹಾಳೆಯಲ್ಲಿ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪೂರ್ಣ ವಿಳಾಸವನ್ನು ಬರೆಯಬೇಕು. ವಿಜೇತರಿಗೆ ಪ್ರಥಮ 5,000 ರೂ. ದ್ವಿತೀಯ 3,000 ರೂ., ತೃತೀಯ 2,000 ರೂ. ಹಾಗೂ 10 ಸಮಾಧಾನಕರ ಬಹುಮಾನ 250 ರೂ.ನಂತೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News