ಬ್ಯಾರಿ ಅಕಾಡಮಿಯಿಂದ ಮೆಹಂದಿ ಸ್ಪರ್ಧೆ

Update: 2020-05-27 17:49 GMT

ಮಂಗಳೂರು, ಮೇ 27: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಮಹಿಳೆಯರಿಗೆ ಮೆಹಂದಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೆಹಂದಿಯನ್ನು ಸ್ಫುಟವಾಗಿ ಬಿಡಿಸಬೇಕು. ಬಿಡಿಸಿದ ಹಸ್ತದ ಜೊತೆಯಲ್ಲಿ ಒಂದೇ ಮೆಹೆಂದಿ ಬಿಡಿಸಿದ ಚಿತ್ರದ ಛಾಯಚಿತ್ರಗಳನ್ನು 3 ವಿಧದ ಭಂಗಿಯಲ್ಲಿ ಕಳುಹಿಸಬೇಕು. ಮೆಹಂದಿ ಬಿಡಿಸಿದ ಹಸ್ತದ ಚಿತ್ರದೊಂದಿಗೆ ಒಂದು ಹಾಳೆಯಲ್ಲಿ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್‌ನ್ನು ಸ್ಪಷ್ಟವಾಗಿ ಭಾವಚಿತ್ರ ಕಾಣಿಸುವಂತೆ ಜೂ.10ರೊಳಗೆ ಅಕಾಡಮಿಯ ವಾಟ್ಸ್‌ಆ್ಯಪ್ ಸಂಖ್ಯೆ 7483946578ಕ್ಕೆ ಕಳುಹಿಸಬೇಕು.

ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಭಾರತೀಯ ಶೈಲಿಯ ಅತ್ಯಾಕರ್ಷಕ ವಿನ್ಯಾಸದಿಂದ ಕೂಡಿರಬೇಕು. ವಿಜೇತರಿಗೆ ಪ್ರಥಮ 5,000 ರೂ., ದ್ವಿತೀಯ 3,000 ರೂ., ತೃತೀಯ 2,000 ರೂ., ಮತ್ತು 5 ಅತ್ಯಾಕರ್ಷಕ 500 ರೂ.ನಂತೆ ಹಾಗೂ 20 ಸಮಾಧಾನ ಕರ ಬಹುಮಾನ 250 ರೂ. ನೀಡಲಾಗುವುದು. ಭಾಗವಹಿಸಿದ ಸ್ಪರ್ಧಾಳುಗಳಿಗೆ ಅಕಾಡಮಿಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಅಕಾಡಮಿಯ ಸದಸ್ಯೆ ನಫೀಸಾ ಮಿುಸ್ರಿಯಾ (ಮೊ: 9743362663)ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News