‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆಗೆ ಬರೆಹ ಆಹ್ವಾನ

Update: 2020-05-27 17:53 GMT

ಮಂಗಳೂರು, ಮೇ 27: ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರತೀ 2 ತಿಂಗಳಿ ಗೊಮ್ಮೆ ಹೊರತರುವ ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಲು ಬ್ಯಾರಿ ಇತಿಹಾಸ/ಸಂಶೋಧನಾ ಲೇಖನಗಳು/ಬ್ಯಾರಿ ಪುಸ್ತಕ ಪರಿಚಯ/ಮರೆಯಬಾರದ ಬ್ಯಾರಿ ಮಹನೀಯರು/ಬ್ಯಾರಿ ಕಥೆ/ಕವನ/ಚುಟುಕುಗಳನ್ನು ಆಹ್ವಾನಿಸಲಾಗಿದೆ.

ಬರೆಹಗಳನ್ನು ನುಡಿ ಫಾಂಟ್‌ನಲ್ಲಿ ಟೈಪ್ ಮಾಡಿ ಕಳುಹಿಸಬಹುದು. ಹೆಸರು ಮತ್ತು ಪೂರ್ಣ ವಿಳಾಸವಿಲ್ಲದ ಬರೆಹಗಳನ್ನು ಪ್ರಕಟಿಸಲಾಗು ವುದಿಲ್ಲ. ಪ್ರಕಟಿತ ಬರೆಹಗಳಿಗೆ ಗೌರವ ಸಂಭಾವನೆ ಪಾವತಿಸಲಾಗುವುದು.

ಲೇಖಕರು ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಅಕಾಡಮಿಯ ಕಚೇರಿಗೆ ((ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, 2ನೇ ಮಹಡಿ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು 575001)ಕಳುಹಿಸಬೇಕು ಅಥವಾ ಬೆಲ್ಕಿರಿ ದ್ವೈಮಾಸಿಕ ಸಂಚಿಕೆಯ ಸಂಪಾದಕ ಜಲೀಲ್ ಮುಕ್ರಿ (ವಾ.ನಂ: 9945479369)ಕ್ಕೆ ಕಳುಸಿಕೊಡುವಂತೆ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News