ಪೀಡಿಯಾಟ್ರಿಕ್ ಸರ್ಜರಿ ಹುದ್ದೆಗೆ ನೇರ ಸಂದರ್ಶನ

Update: 2020-05-27 17:54 GMT

ಮಂಗಳೂರು, ಮೇ 27 : ಡಿಎನ್‌ಬಿ ಕೋರ್ಸಿನ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಖಾಲಿ ಇರುವ ಒಂದು ಹುದ್ದೆಗೆ ಸೀನಿಯರ್ ಕನ್ಸಲ್ಟಂಟ್/ಪಿ.ಜಿ. ಟೀಚರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜೂ.2ರಂದು ವೆನ್ಲಾಕ್ ಜಿಲ್ಲಾ ಶಸ್ತ್ರಚಿಕಿತ್ಸರ ಕಚೇರಿಯಲ್ಲಿ ನೇರ ಸಂದರ್ಶನದ ನಡೆಯಲಿದೆ.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ(ಎಂ.ಎಸ್/ಎಂ.ಡಿ/ಡಿ.ಎನ್.ಬಿ) ಪಡೆದು 5 ವರ್ಷಗಳ ಬೋಧನಾ ಅನುಭವವಿರಬೇಕು. 10 ವರ್ಷ ಸೇವೆ ಸಲ್ಲಿಸಿರಬೇಕು. ವಯೋಮಿತಿ 67 ವರ್ಷದೊಳಗಿರಬೇಕು.

ಮಾಹಿತಿಗಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ (ದೂ.ಸಂ: 0824-2413205, 0824-2421351) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News